ADVERTISEMENT

ಬಿಹಾರದಲ್ಲಿ ಬಿಸಿಗಾಳಿ ಸತ್ತವರ ಸಂಖ್ಯೆ 129ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 19:21 IST
Last Updated 17 ಜೂನ್ 2019, 19:21 IST
ಬಿಸಿಲಿನಿಂದ ಬಳಲಿದ ರೋಗಿಯೊಬ್ಬರು ಗಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು
ಬಿಸಿಲಿನಿಂದ ಬಳಲಿದ ರೋಗಿಯೊಬ್ಬರು ಗಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು   

ಪಟ್ನಾ: ಕಳೆದ 24 ಗಂಟೆಗಳಲ್ಲಿ ಬಿಸಿಗಾಳಿ ಬಿಹಾರದ 77 ಜೀವಗಳನ್ನು ಬಲಿ ಪಡೆದಿದೆ. ಈ ಮೂಲಕ ಕಳೆದ ಎರಡು ದಿನಗಳಲ್ಲಿ ಬಿಸಿಲ ಝಳಕ್ಕೆ 129 ಮಂದಿ ಮೃತಪಟ್ಟಿದ್ದಾರೆ.

ಔರಂಗಾಬಾದ್‌, ಗಯಾ ಮತ್ತು ನವಾಡ ಜಿಲ್ಲೆಗಳಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಶನಿವಾರ ಈ ಮೂರು ಜಿಲ್ಲೆಗಳಲ್ಲಿ 52 ಮಂದಿ ಸಾವಿಗೀಡಾಗಿದ್ದರು. ಇದೀಗಪಟ್ನಾ, ಬುಕ್ಸಾರ್‌, ಆರಾ ಜಿಲ್ಲೆಗಳಲ್ಲೂ ತಾಪಕ್ಕೆ ಜನರು ಬಲಿಯಾಗುತ್ತಿದ್ದಾರೆ.

ಹವಾಮಾನ ಇಲಾಖೆ ಈ ವೇಳೆ ಆಶಾದಾಯಕ ಸುದ್ದಿ ನೀಡಿದ್ದು, ಇದೇ 22ರಿಂದ ಸಾಧಾರಣ ಮಳೆ ಆಗಲಿದೆ ಎಂದಿದೆ.

ADVERTISEMENT

ಶಾಲೆಗಳಿಗೆ ರಜೆ: ರಾಜ್ಯ ಸರ್ಕಾರವು ಶಾಲಾ–ಕಾಲೇಜುಗಳಿಗೆ ಜೂನ್‌ 23ರವರೆಗೆ ರಜೆ ಘೋಷಿಸಿದೆ. ಗಯಾ ಜಿಲ್ಲಾಡಳಿತ ಸೆಕ್ಷನ್‌ 144ರ ಅಡಿ ನಿಷೇಧಾಜ್ಞೆ ಜಾರಿ ಮಾಡಿದ್ದು, ನರೇಗಾ ಯೋಜನೆ ಮತ್ತು ಕಟ್ಟಡ ಕಾಮಗಾರಿ ನಡೆಸದಂತೆ ಜಿಲ್ಲಾಧಿಕಾರಿ ಅಭಿಷೇಕ್‌ ಸಿಂಗ್‌ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.