ADVERTISEMENT

ರಾಜಸ್ಥಾನ | ಭಾರಿ ಮಳೆ; ಹಲವು ಜಿಲ್ಲೆಗಳ ಶಾಲೆಗಳಿಗೆ ರಜೆ; ಕೆಲವೆಡೆ ರೆಡ್ ಅಲರ್ಟ್

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 2:15 IST
Last Updated 29 ಜುಲೈ 2025, 2:15 IST
<div class="paragraphs"><p>ಸಂಗ್ರಹ ಚಿತ್ರ (ಪ್ರಾತಿನಿಧಿಕ)&nbsp;</p></div>

ಸಂಗ್ರಹ ಚಿತ್ರ (ಪ್ರಾತಿನಿಧಿಕ) 

   

ಜೈಪುರ: ರಾಜಸ್ಥಾನದಲ್ಲಿ ಭಾರಿ ಮಳೆಯಾಗುತ್ತಿದ್ದು, ಭಿಲ್ವಾರಾ, ಚಿತ್ತೋರ್‌ಗಢ, ಝಲಾವರ್, ಕೋಟಾ, ಪಾಲಿ ಮತ್ತು ಸಿರೋಹಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರಿ ಮಳೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ( ಜುಲೈ 29) 11 ಜಿಲ್ಲೆಗಳ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಝಲಾವರ್, ಕೋಟಾ, ಚಿತ್ತೋರ್‌ಗಢ, ಟೋಂಕ್, ಭಿಲ್ವಾರಾ, ಬರಾನ್, ಡುಂಗರ್‌ಪುರ, ಧೋಲ್ಪುರ್, ಸಲೂಂಬರ್, ಬನ್ಸ್ವಾರಾ, ಅಜ್ಮೀರ್ ಜಿಲ್ಲೆಗಳಲ್ಲಿ ರಜೆಯನ್ನು ವಿಸ್ತರಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಇಂದು 3 ಜಿಲ್ಲೆಗಳಿಗೆ ರೆಡ್ ಅಲರ್ಟ್, 5 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಮತ್ತು 19 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪೂರ್ವ ರಾಜಸ್ಥಾನದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಕೋಟಾದ ರಾಮಗಂಜ್ ಮಂಡಿಯಲ್ಲಿ 24.2 ಸೆಂ.ಮೀ ಮತ್ತು ಭಿಲ್ವಾರದ ಜೈತುರಾದಲ್ಲಿ 23.5 ಸೆಂ.ಮೀ ಮಳೆಯಾಗಿದೆ. ಪಾಲಿ ಜಿಲ್ಲೆಯ ಬಾಲಿಯಲ್ಲಿ 8.8 ಸೆಂ.ಮೀ ಜಾಲಾವರ್‌ನ ಬಕಾನಿಯಲ್ಲಿ 6.1 ಸೆಂ.ಮೀ , ಬರಾನ್‌ನ ಅಟ್ರುದಲ್ಲಿ 4.3 ಸೆಂ.ಮೀ ಛಾಬ್ರಾದಲ್ಲಿ 2.6 ಸೆಂ.ಮೀ, ಭಿಲ್ವಾರದ ಬಿಜೋಲಿಯಾದಲ್ಲಿ 6.4 ಸೆಂ.ಮೀ, ಬುಂದಿಯ ನೈನ್ವಾನ್‌ನಲ್ಲಿ 2.8 ಸೆಂ.ಮೀ ಮತ್ತು ಅಲ್ ಬೆಹ್ರೋದಲ್ಲಿ 3.1 ಸೆಂ.ಮೀ ಮಳೆ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಸ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಲಾಗಿದೆ. ಜೂನ್ 1ರಿಂದ ಜುಲೈ 28 ರವರೆಗೆ, ರಾಜ್ಯದಲ್ಲಿ 36.976 ಸೆಂ.ಮೀ ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.