ADVERTISEMENT

ಮುಂಬೈನಲ್ಲಿ ಎಡಬಿಡದೆ ಸುರಿದ ಮಳೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 15:07 IST
Last Updated 5 ಜುಲೈ 2020, 15:07 IST
ಉಕ್ಕಿ ಹರಿದ ಪೊವಾಯಿ 
ಉಕ್ಕಿ ಹರಿದ ಪೊವಾಯಿ    

ಮುಂಬೈ: ಮುಂಬೈ ಮತ್ತು ಅದರನೆರೆ ಜಿಲ್ಲೆಗಳಲ್ಲಿ ಮೂರನೇ ದಿನವಾದ ಭಾನುವಾರವು ಸತತವಾಗಿ ಧಾರಾಕಾರ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ಹರಿಯಿತು.

ಪೊವಾಯಿ ಸರೋವರವು ತುಂಬಿ ಹರಿಯುತ್ತಿದೆ. ಸಮುದ್ರ ಹಾಗೂ ಜಲಾವೃತ ಪ್ರದೇಶಗಳಿಂದ ದೂರ ಉಳಿಯುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕರಾವಳಿಯಲ್ಲಿಯೂ ಉತ್ತಮ ಮಳೆಯಾಗಿದೆ.

ಮುಂದಿನ ಎರಡು ದಿನಗಳಲ್ಲಿ ಮಹಾರಾಷ್ಟ್ರದ ಕರಾವಳಿ ಹಾಗೂ ಗುಜರಾತ್‌ನ ಸೌರಾಷ್ಟ್ರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೇ ಮಹಾರಾಷ್ಟ್ರ –ಗೋವಾ ಕರಾವಳಿ ತೀರದಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದೆ.

ADVERTISEMENT

ಮುಂಬೈನ ಚೆಂಬೂರು, ವಡಾಲ, ಧಾರಾವಿ, ಅಂಧೇರಿ, ಹಿಂದ್‌ಮಾತಾ ಜಂಕ್ಷನ್‌, ಖಾರ್‌, ಮಿಲನ್‌ ಹಾಗೂ ಧಹಿಸರ್‌ ಸುರಂಗಗಳಲ್ಲಿ ನೀರು ತುಂಬಿಕೊಂಡಿದೆ. ದಕ್ಷಿಣ ಮುಂಬೈನಲ್ಲಿ ಭಾನುವಾರ ಬೆಳಿಗ್ಗೆ 8.30ರವರೆಗೆ 24 ಗಂಟೆಯ ಅವಧಿಯಲ್ಲಿ 129.6 ಮಿ.ಮೀಟರ್‌ ಮಳೆಯಾಗಿದೆ. ಪಶ್ಚಿಮ ಭಾಗದಲ್ಲಿ 200.8 ಮಿ.ಮೀ ಮಳೆಯಾಗಿರುವುದು ಸಾಂತಾಕ್ರೂಜ್‌ ಹವಾಮಾನ ಕೇಂದ್ರದಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.