ADVERTISEMENT

ಮುಂಬೈಯಲ್ಲಿ ಭಾರೀ ಮಳೆ: ಶಾಲೆಗೆ ರಜೆ, ರೈಲು ವಿಳಂಬ 

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 6:13 IST
Last Updated 4 ಸೆಪ್ಟೆಂಬರ್ 2019, 6:13 IST
ಕೃಪೆ: ಟ್ವಿಟರ್
ಕೃಪೆ: ಟ್ವಿಟರ್    

ಮುಂಬೈ: ಮಂಗಳವಾರ ರಾತ್ರಿ ಸುರಿದ ಮಳೆಗೆ ಮುಂಬೈಯ ಹಲವಾರು ಪ್ರದೇಶಗಳು ಜಲಾವೃತವಾಗಿರುವುದರಿಂದ ಇಲ್ಲಿನ ಶಾಲೆಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ. ರಸ್ತೆಗಳಲ್ಲಿ ನೀರು ತುಂಬಿದ್ದರಿಂದ ವಾಹನ ಸಂಚಾರಕ್ಕೆ ತಡೆಯುಂಟಾಗಿದ್ದು ಬೆಳಗ್ಗೆ ರೈಲುಗಳು ತಡವಾಗಿ ಸಂಚರಿಸಿವೆ.

ಮಂಗಳವಾರ ಇಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು, ಮುಂದಿನ ಎರಡು ದಿನ ಮಳೆ ಮುಂದುವರಿಯಲಿದೆ.
ಭಾರತೀಯ ಹವಾಮಾನ ಇಲಾಖೆಯಪ್ರಕಾರ ಎರಡು ದಿನಗಳ ಕಾಲ ಇಲ್ಲಿ ಭಾರೀ ಮಳೆಯಾಗಲಿದೆ. ಶಾಲೆಗಳಿಗೆ ರಜೆ ಘೋಷಿಸಿದ್ದು, ಈಗಾಗಲೇ ಶಾಲೆಯಲ್ಲಿರುವ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಸೇರಿಸುವ ಜವಾಬ್ದಾರಿ ಶಾಲಾ ಪ್ರಾಂಶುಪಾಲರದ್ದು ಎಂದು ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪರೇಷನ್ ಮಂಗಳವಾರ ಬೆಳಗ್ಗೆ ಟ್ವೀಟಿಸಿದೆ.

ಅದೇವೇಳೆ ಸಮುದ್ರದ ಹತ್ತಿರ ಸಾಹಸ ಮಾಡುವುದಾಗಲೀ ನೀರು ನಿಂತಿರುವ ಸ್ಥಳಗಳಲ್ಲಿ ನಡೆದಾಡುವುದಾಗಲೀ ಮಾಡಬಾರದು ಎಂದು ಬಿಎಂಸಿ ಟ್ವೀಟಿಸಿದೆ.

ADVERTISEMENT

ಭಾರೀ ಮಳೆಯಿಂದಾಗಿ ಸಬರ್ಬನ್ ರೈಲುಗಳು 10-12 ನಿಮಿಷ ತಡವಾಗಿಯೂ ಹಾರ್ಬರ್ ಲೈನ್ ರೈಲುಗಳು 10 ನಿಮಿಷ ತಡವಾಗಿ ಸಂಚರಿಯತ್ತಿದೆ ಎಂದು ಸೆಂಟ್ರಲ್ ರೈಲ್ವೇ ಹೇಳಿದೆ.
ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಎಂದಿನಂತೆ ನಡೆಯುತ್ತಿದ್ದು, ಕೆಲವೊದು ವಿಮಾನಗಳು ಮಾತ್ರ 10-15 ನಿಮಿಷ ವಿಳಂಬವಾಗಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಟ್ವಿಟರ್‌ನಲ್ಲಿ ಮುಂಬೈ ಮಳೆಯ ಚಿತ್ರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.