ADVERTISEMENT

ಉತ್ತರ ಭಾರತದಲ್ಲಿ ವರ್ಷದ ಮೊದಲ ಹಿಮಪಾತ, ಸಂಕಷ್ಟದಲ್ಲಿದ್ದ 140 ಮಂದಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 9:54 IST
Last Updated 3 ನವೆಂಬರ್ 2018, 9:54 IST
ಉದಯ್‌ ಪುರ ವ್ಯಾಪ್ತಿಯಲ್ಲಿ ಮೊದಲ ಹಿಮಪಾತದ ನೋಟ. ಚಿತ್ರ: ಎಎನ್‌ಐ
ಉದಯ್‌ ಪುರ ವ್ಯಾಪ್ತಿಯಲ್ಲಿ ಮೊದಲ ಹಿಮಪಾತದ ನೋಟ. ಚಿತ್ರ: ಎಎನ್‌ಐ   

ಶ್ರೀನಗರ:ಉತ್ತರಭಾರತದಲ್ಲಿ ಪ್ರಸಕ್ತ ವರ್ಷದ ಮೊದಲ ಹಿಮಪಾತ ಆರಂಭವಾಗಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ಭಾರಿ ಮಳೆ ಮತ್ತು ಹಿಮಪಾತದಿಂದಾಗಿ ಅಪಾಯದಲ್ಲಿ ಸಿಲುಕಿದ್ದ 140 ಜನರನ್ನು ಸೇನೆ ಮತ್ತು ಪೊಲೀಸರು ರಕ್ಷಿಸಿದ್ದಾರೆ.

ಮಳೆ, ಹಿಮಪಾತದಿಂದಾಗಿ ಶುಕ್ರವಾರ ರಾತ್ರಿ ಮೊಘಲ್‌ ರಸ್ತೆಯಲ್ಲಿ ಮುಂದೆ ಪ್ರಯಾಣ ಬೆಳೆಸಲಾಗದೆ ಸಂಕಷ್ಟ ಎದುರಿಸುತ್ತಿದ್ದ 140 ಮಂದಿಯನ್ನು ರಕ್ಷಿಸಲಾಗಿದೆ.

ಪ್ರಯಾಣಿಕರನ್ನು ಸರಾನ್‌ ಕೋಟ್‌ನ ಸೇನಾ ಶಿಬಿರಕ್ಕೆ ಕರೆದೊಯ್ಯಲಾಗಿದೆ. ಅವರಿಗೆ ಅಲ್ಲಿ ಊಟ ಮತ್ತು ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಎಎನ್‌ಐ ಟ್ವಿಟ್‌ ಮಾಡಿದೆ.

ADVERTISEMENT

ಉದಯ್‌ ಪುರ ಮತ್ತು ಸ್ಪಿತಿ ಜಿಲ್ಲೆಯಲ್ಲಿ ಹಿಮಪಾತವಾಗಿರುವುದು.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ವ್ಯಾಪ್ತಿಯಲ್ಲಿ ಮೊದಲ ಹಿಮಪಾತದ ನೋಟ.

ಕೇದಾರನಾಥದಲ್ಲಿ ಮೊದಲ ಹಿಮಪಾತದ ನೋಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.