ಪ್ರಾತಿನಿಧಿಕ ಚಿತ್ರ
ಪಿಟಿಐ
ಹೈದರಾಬಾದ್: ಹೈದರಾಬಾದ್ ನಗರ ಸೇರಿದಂತೆ ರಾಜ್ಯದಾದ್ಯಂತ ಭಾರಿ ಮಳೆ ಸುರಿದ ಪರಿಣಾಮ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗಿದ್ದು, ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎಂದು ವರದಿಯಾಗಿದೆ.
ತೆಲಂಗಾಣದ ಜಿಲ್ಲೆಗಳಾದ ವನಪರ್ತಿ, ಹನುಮಕೊಂಡ, ಮಹಬೂಬ್‌ನಗರ, ನಾಗರಕರ್ನೂಲ್, ನಲಗೊಂಡ, ನಿಜಾಮಾಬಾದ್, ರಂಗಾರೆಡ್ಡಿ, ಸಿದ್ದಿಪೇಟೆ ಜಿಲ್ಲೆಗಳಲ್ಲಿ ಇಂದು (ಮಂಗಳವಾರ) ಭಾರಿ ಮಳೆಯಾಗಿದೆ.
ಯಾದಾದ್ರಿ ಭುವನಗಿರಿಯಲ್ಲಿ 17 ಸೆಂ.ಮೀ, ಜೋಗುಲಾಂಬ ಗದ್ವಾಲ್, ನಾರಾಯಣಪೇಟೆಯ ಮದ್ದೂರ್‌ನಲ್ಲಿ 14 ಸೆಂ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.
ರಾಜ್ಯದ ಆದಿಲಾಬಾದ್, ಕೊಮಾರಂ ಭೀಮ್ ಆಸಿಫಾಬಾದ್, ಮಂಚೇರಿಯಲ್, ನಿರ್ಮಲ್, ವಿಕಾರಾಬಾದ್, ಸಂಗಾರೆಡ್ಡಿ, ಮೇದಕ್, ಕಾಮರೆಡ್ಡಿ, ಮಹಬೂಬ್‌ನಗರ, ನಾಗರ್‌ಕರ್ನೂಲ್, ವನಪರ್ತಿ, ನಾರಾಯಣಪೇಟ್, ಜೋಗುಲಾಂಬ ಗದ್ವಾಲ್ ಜಿಲ್ಲೆಗಳಲ್ಲಿ ನಾಳೆಯವರೆಗೂ (ಬುಧವಾರ) ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (ಎಎಂಡಿ) ತಿಳಿಸಿದೆ.
ಅದಿಲಾಬಾದ್, ಕೊಮಾರಂ ಭೀಮ್, ಆಸಿಫಾಬಾದ್ ಜಿಲ್ಲೆಗಳ ಗುಡುಗು, ಮಿಂಚು, ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಐಎಎಂಡಿ ಹೇಳಿದೆ.
ಸುಮಾರು 40 ವರ್ಷದ ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಆತನ ಮೃತದೇಹ ರಾಮನಗರದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಲಾವೃತಗೊಂಡಿರುವ ಪ್ರದೇಶಗಳಿಗೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.