ADVERTISEMENT

ಮುಂಬೈನಲ್ಲಿ ಭಾರಿ ಮಳೆ

ಪಿಟಿಐ
Published 16 ಜುಲೈ 2020, 9:20 IST
Last Updated 16 ಜುಲೈ 2020, 9:20 IST
ಮುಂಬೈನ ಜಲಾವೃತಗೊಂಡ ರಸ್ತೆಯಲ್ಲಿ ಹಣ್ಣಿನ ಗಾಡಿ ಸಾಗಿಸುತ್ತಿರುವ ವ್ಯಾಪಾರಿ
ಮುಂಬೈನ ಜಲಾವೃತಗೊಂಡ ರಸ್ತೆಯಲ್ಲಿ ಹಣ್ಣಿನ ಗಾಡಿ ಸಾಗಿಸುತ್ತಿರುವ ವ್ಯಾಪಾರಿ   

ಮುಂಬೈ: ಮುಂಬೈನಲ್ಲಿ ಬುಧವಾರ ರಾತ್ರಿಯಿಡೀ ಭಾರಿ ಮಳೆಯಾಗಿದ್ದು ಕೆಲವು ಪ್ರದೇಶಗಳಲ್ಲಿ ಮಳೆಯಿಂದಾಗಿ ಹೆಚ್ಚಿನ ಹಾನಿಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಗುರುವಾರ ಬೆಳಿಗ್ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ನಗರದ ಬಾದ್ರಾ, ಮಹಾಲಕ್ಷ್ಮೀ ಪ್ರದೇಶದಲ್ಲಿ ಕ್ರಮವಾಗಿ 201 ಮಿ.ಮೀ ಮತ್ತು 129 ಮಿ.ಮೀ ಹಾಗೂ ಮುಂಬೈನ ಉಪನಗರಗಳಲ್ಲಿ191.2 ಮಿ.ಮೀ ಮಳೆಯಾಗಿದೆ ಎಂದು ಐಎಂಡಿ ಮುಂಬೈನ ಉಪ ಮಹಾ ನಿರ್ದೇಶಕ ಕೆ.ಎಸ್‌ ಹೊಸಲಿಕರ್‌ ತಿಳಿಸಿದರು.

ಗುರುವಾರವೂಮುಂಬೈನ ಹಲವೆಡೆ ಬಿರುಸಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹೊಸಲಿಕರ್‌ ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಕಳೆದ 24 ಗಂಟೆಗಳಲ್ಲಿ ರತ್ನಗಿರಿಯ ಕರಾವಳಿ ಪ್ರದೇಶದಲ್ಲಿ 127.2 ಮಿ.ಮೀ., ರತ್ನಗಿರಿಯ ವೀಕ್ಷಣಾಲಯದಲ್ಲಿ 97.5 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.