ADVERTISEMENT

ಉತ್ತರಾಖಂಡ | ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಉತ್ತರಕಾಶಿಯಲ್ಲಿ ನಡೆದ ಘಟನೆ

ಪಿಟಿಐ
Published 23 ಆಗಸ್ಟ್ 2019, 15:53 IST
Last Updated 23 ಆಗಸ್ಟ್ 2019, 15:53 IST
ನದಿದಡದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್ ಪಿಟಿಐ ಚಿತ್ರ 
ನದಿದಡದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್ ಪಿಟಿಐ ಚಿತ್ರ    

ಡೆಹ್ರಾಡೂನ್ (ಉತ್ತರಕಾಶಿ): ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಪ್ರವಾಹ ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಖಾಸಗಿ ಹೆಲಿಕಾಪ್ಟರ್‌ವೊಂದುತಿಕೋಜಿ ಬಳಿಯ ನದಿದಡದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಹೆಲಿಕಾಪ್ಟರ್ ಭಾಗಶಃ ಹಾನಿಗೀಡಾಗಿದ್ದು, ಪೈಲಟ್ ಮತ್ತು ಸಹ ಪೈಲಟ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಆರ್ಯನ್ ಏವಿಯೇಷನ್‌ಗೆ ಸೇರಿದ ಹೆಲಿಕಾಪ್ಟರ್ ಚಿವಾ ಪ್ರದೇಶಕ್ಕೆ ಪರಿಹಾರ ಸಾಮಾಗ್ರಿಗಳನ್ನು ಕೊಂಡೊಯ್ಯುತ್ತಿತ್ತು. ಮಾರ್ಗಮಧ್ಯೆದಲ್ಲಿ ಹೆಲಿಕಾಪ್ಟರ್ ತಿಕೋಜಿ ಸಮೀಪದ ನಾಗಾವಾಡದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಉತ್ತರಕಾಶಿಯ ಜಿಲ್ಲಾಧಿಕಾರಿ ಆಶೀಶ್ ಚೌಹಾನ್ ತಿಳಿಸಿದ್ದಾರೆ.

ADVERTISEMENT

ಪರಿಹಾರ ಸಾಮಾಗ್ರಿ ಒದಗಿಸಿ ಹಿಂತಿರುಗುತ್ತಿದ್ದ ಖಾಸಗಿ ಹೆಲಿಕಾಪ್ಟರ್‌ವೊಂದು ಮೋಲ್ಡಿ ಬಳಿ ಅಪಘಾತಕ್ಕೀಡಾಗಿ ಮೂವರು ಸಾವನ್ನಪ್ಪಿದ್ದ ಘಟನೆಯ ಎರಡು ದಿನಗಳ ನಂತರ ಈ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.