ADVERTISEMENT

ಪ್ರವಾಹ: ರಕ್ಷಣೆಗೆ ಬಂದ ಹೆಲಿಕಾಪ್ಟರ್‌

ಪಿಟಿಐ
Published 1 ಆಗಸ್ಟ್ 2021, 6:43 IST
Last Updated 1 ಆಗಸ್ಟ್ 2021, 6:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿಮ್ಲಾ: ಹಿಮಾಚಲ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ 66 ಜನರ ರಕ್ಷಣೆಗಾಗಿ ರಕ್ಷಣಾ ಹೆಲಿಕಾಪ್ಟರ್‌ ಭಾನುವಾರ ಲಾಹೌಲ್‌–ಸ್ಪಿಟಿ ಜಿಲ್ಲೆಗೆ ಬಂದಿದೆ.

‘ಭಾನುವಾರ ಬೆಳಿಗ್ಗೆ ಹಲೆಕಾಪ್ಟರ್‌ ಬಂದಿದ್ದು, ಉದಯಪುರದ ವಿವಿಧ ಸ್ಥಳಗಳಲ್ಲಿ ಸಿಲುಕಿರುವ 66 ಜನರನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿ‌ರ್ದೇಶಕ ಸುದೇಶ್‌ ಕುಮಾರ್‌ ಮೊಖ್ತಾ ತಿಳಿಸಿದರು.

ಈ 66 ಜನರ ಪೈಕಿ 37 ಜನರು ಜಹ್ಲಾಮಾ, 15 ಜನರು ಶಂಶಾ ಮತ್ತು 14 ಜನರು ಫುಡಾದಲ್ಲಿ ಸಿಲುಕಿದ್ದಾರೆ. ಭಾನುವಾರ ಹವಾಮಾನ ಅನುಕೂಲಕರವಾಗಿದ್ದು, ಹೆಲಿಕಾಪ್ಟರ್‌ ಹಾರಾಟಕ್ಕೆ ಅನುಮತಿ ದೊರೆತಿದೆ. ಹಿಂದಿನ ಎರಡು ದಿನ ಕಟ್ಟ ಹವಾಮಾನದ ಕಾರಣ ಹೆಲಿಕಾಪ್ಟರ್‌ ಹಾರಾಟಕ್ಕೆ ಅನುಮತಿ ದೊರೆತಿರಲಿಲ್ಲ ಎಂದರು.

ADVERTISEMENT

ಈಗಾಗಲೇ ಜಿಪ್‌ಲೈನ್‌ ಅಥವಾ ರೋಪ್‌ವೇ ಮೂಲಕ 178 ಜನರನ್ನು ರಕ್ಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.