ಸಹಾರಣ್‍ಪುರ್: ತುಂಡು ತುಂಡು ಮಾಡುತ್ತೇವೆ ಎಂದು ಹೇಳುವವರೊಂದಿಗೆ ಕಾಂಗ್ರೆಸ್ ಪಕ್ಷದ ನಾಯಕರಿಗೆ ವಿಶೇಷ ಪ್ರೀತಿ ಎಂದು ಕಾಂಗ್ರೆಸ್ ನಾಯಕ ಇಮ್ರಾನ್ ಮಸೂದ್ ಅವರ ದ್ವೇಷದಿಂದ ಕೂಡಿದ ಭಾಷಣದ ಬಗ್ಗೆ ಉಲ್ಲೇಖಿಸಿ ನರೇಂದ್ರ ಮೋದಿ ಮಾತನಾಡಿದ್ದಾರೆ.
ಉತ್ತರಪ್ರದೇಶದ ಸಹಾರಣ್‍ಪುರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ವಿಪಕ್ಷಗಳು ಬೋಟಿ ಬೋಟಿ (ತುಂಡು ತುಂಡು ಮಾಡುತ್ತೇವೆ) ಎಂದು ಬೆದರಿಕೆಯೊಡ್ಡಿದ್ದರು.ಆದರೆ ನಾವು ಬೇಟಿ ಬೇಟಿ( ಹೆಣ್ಮಕ್ಕಳ) ಗೌರವ ಕಾಪಾಡುವ ಬಗ್ಗೆ ಮಾತನಾಡುತ್ತೇವೆ ಎಂದಿದ್ದಾರೆ.
ಸಹಾರಣ್‍ಪುರ ಲೋಕಸಭಾ ಕ್ಷೇತ್ರದಲ್ಲಿತುಂಡು ತುಂಡು ಮಾಡುತ್ತೇನೆ ಎಂದು ಹೇಳಿದ್ದರಲ್ಲಾ ಅವರ ಮೇಲೆ ಕಾಂಗ್ರೆಸ್‍ನ ಯುವರಾಜನಿಗೆ ವಿಶೇಷ ಒಲವು ಇದೆ. ನೆನಪಿಡಿ ಅವರು ಬೋಟಿ ಬೋಟಿ ವಿಷಯದತ್ತ ಗಮನ ಹರಿಸಿದರೆ ನಾವು ಹೆಣ್ಣು ಮಕ್ಕಳ ಗೌರವದ ವಿಷಯಕ್ಕೆ ಗಮನ ನೀಡುತ್ತೇವೆ ಎಂದು ಮೋದಿ ಹೇಳಿದ್ದಾರೆ.
ಮೋದಿ ಹಟಾವೋ ಎಂಬುದೊಂದೇ ವಿಪಕ್ಷಗಳ ಅಜೆಂಡಾ, ವಿಪಕ್ಷಗಳು ಕುಟುಂಬ ರಾಜಕಾರಣವನ್ನು ಮಾತ್ರ ಪ್ರೋತ್ಸಾಹಿಸುತ್ತಿವೆ. ಅವರು ನನ್ನನ್ನು ಶೌಚಾಲಯದ ಚೌಕೀದಾರ ಎನ್ನುತ್ತಾರೆ. ಆದರೆ ಇದೂ ನನಗೆ ಸಿಕ್ಕಿದ ಗೌರವ ಎಂದು ಮೋದಿ ಹೇಳಿದ್ದಾರೆ.
ಮೋದಿ ಉಲ್ಲೇಖಿಸಿದ ಇಮ್ರಾನ್ ಮಸೂದ್ ಯಾರು?
ಸಹಾರಣ್‍ಪುರದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್, 2014ರ ಲೋಕಸಭಾ ಚುನಾವಣೆ ವೇಳೆ ಮಸೂದ್ ಮಾಡಿದ ಭಾಷಣದ ವಿಡಿಯೊವೊಂದು ವೈರಲ್ ಆಗಿತ್ತು.ಆಗ ಮೋದಿ ಗುಜರಾತ್ ಮುಖ್ಯಮಂತ್ರಿ ಮತ್ತು ಪ್ರಧಾನಿ ಅಭ್ಯರ್ಥಿಯಾಗಿದ್ದರು.ಮೋದಿ ವಿರುದ್ಧ ಕೆಟ್ಟ ಪದ ಬಳಸಿ ಭಾಷಣ ಮಾಡಿದ್ದರು ಮಸೂದ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.