ADVERTISEMENT

ಮೆಹಬೂಬ ಮುಫ್ತಿಗೆ ಸಮನ್ಸ್‌ : ತಡೆಯಾಜ್ಞೆಗೆ ಕೋರ್ಟ್‌ ನಿರಾಕರಣೆ

ಹಣ ಅಕ್ರಮ ವರ್ಗಾವಣೆ

ಪಿಟಿಐ
Published 19 ಮಾರ್ಚ್ 2021, 10:40 IST
Last Updated 19 ಮಾರ್ಚ್ 2021, 10:40 IST
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ   

ನವದೆಹಲಿ: ಹಣ ಅಕ್ರಮ ವರ್ಗಾವಣೆ ‍ಪ್ರಕರಣದಡಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಜಾರಿಗೊಳಿಸಿದ ಸಮನ್ಸ್‌ಗೆ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಈ ಸಂಬಂಧ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎನ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಜಸ್ಮೀತ್‌ ಸಿಂಗ್‌ ಅವರ ಪೀಠವು ಸಮನ್ಸ್‌ ವಿರುದ್ಧ ತಡೆಯಾಜ್ಞೆ ನೀಡಲು ನಿರಾಕರಿಸಿದೆ.

ಮಾರ್ಚ್‌ 22 ರಂದು ವಿಚಾರಣೆಗೆ ಹಾಜರಾಗುವಂತೆ ಮೆಹಬೂಬಾ ಮುಫ್ತಿಗೆ ಇಡಿಯು ಸಮನ್ಸ್‌ ಜಾರಿ ಮಾಡಿದೆ. ಇದರ ವಿರುದ್ಧ ಮೆಹಬೂಬಾ ಮುಫ್ತಿ ಅವರು ತಡೆಯಾಜ್ಞೆ ಕೋರಿದ್ದರು.

ADVERTISEMENT

‘ಜಾರಿ ನಿರ್ದೇಶನಾಲಯವು ಮೊದಲಿನಂತೆ ಈ ಬಾರಿಯೂ ಮುಫ್ತಿ ಅವರು ವೈಯಕ್ತಿಕವಾಗಿ ವಿಚಾರಣೆಗೆ ಹಾಜರಾಗಬೇಕು’ ಎಂದು ಒತ್ತಾಯಿಸಬಾರದು ಎಂದು ಮುಫ್ತಿ ಪರ ವಕೀಲ ನಿತ್ಯಾ ರಾಮಕೃಷ್ಣನ್‌ ಅವರು ಮನವಿ ಮಾಡಿದರು.

ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಇಡಿ ‍ಪರ ಹಾಜರಿದ್ದ ಸಾಲಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು,‘ ಈ ಬಾರಿ ಮುಫ್ತಿ ಅವರು ಇ.ಡಿ ಅಧಿಕಾರಿಗಳ ಮುಂದೆ ಹಾಜರಾಗಲೇಬೇಕು’ ಎಂದು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.