ನವದೆಹಲಿ: ಪ್ರಯಾಗರಾಜ್‌ಗೆ ಸಂಚರಿಸುವ ವಿಮಾನಗಳ ಟಿಕೆಟ್ ದುಬಾರಿ ಕುರಿತು ಕಳವಳ ವ್ಯಕ್ತವಾಗಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಪ್ರಯಾಣ ದರವನ್ನು ಸರಿದೂಗಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ.
ಸ್ಪೈಸ್‌ಜೆಟ್ ಸೇರಿದಂತೆ ಹಲವು ಸಂಸ್ಥೆಗಳ ವಿಮಾನಗಳು ಪ್ರಯಾಗ್‌ರಾಜ್‌ಗೆ ಹೆಚ್ಚಾಗಿ ಸಂಚರಿಸುತ್ತಿವೆ.
ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳೊಂದಿಗೆ ಜನವರಿ 23ರಂದು ಸಭೆ ನಡೆಸಿರುವ ಡಿಜಿಸಿಎ, ಮತ್ತಷ್ಟು ವಿಮಾನಗಳ ಹಾರಾಟ ಆರಂಭಿಸುವ ಮೂಲಕ, ಟಿಕೆಟ್ ದರ ಸರಿದೂಗಿಸುವಂತೆ ಸೂಚಿಸಿದೆ.
ಮಹಾಕುಂಭ ಮೇಳದ ಹಿನ್ನೆಲೆಯಲ್ಲಿ ಪ್ರಯಾಗರಾಜ್‌ಕ್ಕೆ ವಿಮಾನ ಸಂಚಾರಕ್ಕೆ ಬೇಡಿಕೆ ಹೆಚ್ಚಾದ ಕಾರಣ, ಹೆಚ್ಚುವರಿಯಾಗಿ 81 ವಿಮಾನಗಳ ಸಂಚಾರಕ್ಕೆ ಜನವರಿಯಲ್ಲಿ ಅನುಮೋದನೆ ನೀಡಲಾಗಿದೆ. ದೇಶದ ಬೇರೆ ಬೇರೆ ಕಡೆಗಳಿಂದ ಪ್ರಯಾಗರಾಜ್‌ಗೆ ಸಂಪರ್ಕಿಸುವ ವಿಮಾನಗಳ ಸಂಖ್ಯೆಯನ್ನು 132ಕ್ಕೆ ಏರಿಸಲಾಗಿದೆ ಎಂದು ಟ್ವೀಟ್ ಮಾಡಿದೆ.
ಕುಂಭ ಮೇಳಕ್ಕೆ ತೆರಳುವ ಪ್ರಯಾಣಿಕರ ಸಂಖ್ಯೆ ಭಾರಿ ಏರಿಕೆಯಾದಂತೆ, ಟಿಕೆಟ್ ದರವೂ ಹಲವು ಪಟ್ಟು ಹೆಚ್ಚಳವಾಗಿದೆ. ದೆಹಲಿ–ಪ್ರಯಾಗರಾಜ್ ವಿಮಾನಗಳ ಟಿಕೆಟ್ ದರ ಶೇ 21ರಷ್ಟು ಏರಿಕೆಯಾಗಲಿದೆ ಎಂದು ಇದೇ ತಿಂಗಳು ಎಂದು 'Ixigo' ವೆಬ್‌ಸೈಟ್ ತಿಳಿಸಿತ್ತು.
ಮಹಾಕುಂಭ ಮೇಳವು ಜನವರಿ 13ರಂದು ಆರಂಭವಾಗಿದ್ದು, ಫೆಬ್ರುವರಿ 26ರಂದು ಮುಕ್ತಾಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.