ADVERTISEMENT

ಕಣಿವೆಯಾದ್ಯಂತ ಹಿಮ ಸುರಿಯಲು ಆರಂಭ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 14:42 IST
Last Updated 6 ಡಿಸೆಂಬರ್ 2021, 14:42 IST
ಬಾರಾಮುಲ್ಲಾ ಜಿಲ್ಲೆಯ ತಂಗ್‌ಮಾರ್ಗ್‌ –ಗುಲ್ ಮಾರ್ಗ್ ಮಾರ್ಗಮಧ್ಯೆದ ಪ್ರದೇಶವೊಂದರಲ್ಲಿ  ಪ್ರವಾಸಿಗರು ಆಟೋಟದಲ್ಲಿ ತೊಡಗಿದ್ದ ದೃಶ್ಯ
ಬಾರಾಮುಲ್ಲಾ ಜಿಲ್ಲೆಯ ತಂಗ್‌ಮಾರ್ಗ್‌ –ಗುಲ್ ಮಾರ್ಗ್ ಮಾರ್ಗಮಧ್ಯೆದ ಪ್ರದೇಶವೊಂದರಲ್ಲಿ  ಪ್ರವಾಸಿಗರು ಆಟೋಟದಲ್ಲಿ ತೊಡಗಿದ್ದ ದೃಶ್ಯ   

ಶ್ರೀನಗರ: ಜಮ್ಮು ಕಾಶ್ಮೀರದ ಬಹುತೇಕ ಪ್ರದೇಶಗಳಲ್ಲಿ ಭಾನುವಾರ ರಾತ್ರಿ ಹಿಮ ಸುರಿದಿದೆ.

ಕಣಿವೆಯಾದ್ಯಂತ ಕನಿಷ್ಠ ತಾಪಮಾನ ಮುಂದುವರೆದಿದ್ದು, ಪ್ರಸಿದ್ಧ ಪ್ರವಾಸಿ ತಾಣ ಗುಲ್‌ಮಾರ್ಗ್‌ನಲ್ಲಿ –7 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದ್ದು, ಇದು ಕಣಿವೆ ಪ್ರದೇಶದ ಅತ್ಯಂತ ಕನಿಷ್ಠ ತಾಪಮಾನವಾಗಿದೆ. ಕಣಿವೆಯ ಹೆಬ್ಬಾಗಿಲು ಕ್ವಾಜಿಗುಂಡದಲ್ಲಿ 3.2, ಶ್ರೀನಗರದಲ್ಲಿ 2.6, ಪಹಲ್ಗಾಮ್‌ನಲ್ಲಿ 0.6, ಕುಪ್ವಾರದಲ್ಲಿ 1, ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ.

ಜಮ್ಮು ಮತ್ತು ಕಾಶ್ಮೀರದಾದ್ಯಂತ ಭಾನುವಾರ ಮಳೆಯ ಜತೆಯಲ್ಲೇ ಹಿಮ ಸುರಿದಿದ್ದು,ಪ್ರಸಿದ್ಧ ಪ್ರವಾಸಿ ತಾಣ ಗುಲ್‌ಮಾರ್ಗ್‌ನಲ್ಲಿ 7 ಇಂಚಿನಷ್ಟು ಹಿಮ ಬಿದ್ದಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.