ADVERTISEMENT

ಹವಾಮಾನ ಪುನಃಶ್ಚೇತನ ನಿಧಿಗೆ ₹413 ಕೋಟಿ: ಹಿಲರಿ ಕ್ಲಿಂಟನ್‌

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 12:52 IST
Last Updated 6 ಫೆಬ್ರುವರಿ 2023, 12:52 IST
ಹಿಲರಿ ಕ್ಲಿಂಟನ್
ಹಿಲರಿ ಕ್ಲಿಂಟನ್   

ಸುರೇಂದ್ರನಗರ : ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ ‘ಜಾಗತಿಕ ಹವಾಮಾನ ಪುನಃಶ್ಚೇತನ ನಿಧಿ’ ಸ್ಥಾಪಿಸಿದ್ದು, ಇದಕ್ಕೆ ₹413 ಕೋಟಿ (50 ಮಿಲಿಯನ್‌ ಡಾಲರ್‌) ನೆರವು ನೀಡುವುದಾಗಿ ಸೋಮವಾರ ಘೋಷಿಸಿದರು.

ಗುಜರಾತ್‌ಗೆ ಎರಡು ದಿನ ಭೇಟಿ ನೀಡಿರುವ ಅವರು ಇಲ್ಲಿನ ಕೂಡಾದಲ್ಲಿ ಉಪ್ಪು ತಯಾರಿಕಾ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು. ‘ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ಮತ್ತು ಹೊಸ ಜೀವನೋಪಾಯ ಸಂಪನ್ಮೂಲಗಳು ಮತ್ತು ಶಿಕ್ಷಣವನ್ನು ಒದಗಿಸಲು ಈ ನಿಧಿಯು ನೆರವಾಗುವ ಮೂಲಕ ಮಹಿಳೆಯರನ್ನು ಸಶಕ್ತಗೊಳಿಸಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT