ADVERTISEMENT

ಹಿಮಾಚಲ ಪ್ರದೇಶ | ಭಾರಿ ಮಳೆ: 250 ರಸ್ತೆಗಳಲ್ಲಿ ಸಂಚಾರ ಸ್ಥಗಿತ

ಪಿಟಿಐ
Published 18 ಜುಲೈ 2025, 11:24 IST
Last Updated 18 ಜುಲೈ 2025, 11:24 IST
   

ಶಿಮ್ಲಾ:ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, 250 ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಭಾರಿ ಮಳೆ ಹಿನ್ನೆಲೆ ರಾಜ್ಯ ಹವಾಮಾನ ಇಲಾಖೆ ಹಲವು ಪ್ರದೇಶಗಳಲ್ಲಿ ಭಾನುವಾರದವರೆಗೆ ‘ಆರೆಂಜ್‌ ಅಲರ್ಟ್‌’ ಘೋಷಿಸಿದೆ.

ಪ್ರವಾಹ ಪೀಡಿತ ಮಂಡಿ ಜಿಲ್ಲೆಯಲ್ಲಿ 181 ರಸ್ತೆಗಳು, ಸಿರ್ಮೌರ್‌ನಲ್ಲಿ 26 ಹಾಗೂ ಕುಲ್ಲು ಜಿಲ್ಲೆಯಲ್ಲಿ 23 ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಶುಕ್ರವಾರ ಬೆಳಿಗ್ಗೆ ವೇಳೆಗೆ 61 ನೀರು ಸರಬರಾಜು ಘಟಕಗಳು ಹಾಗೂ 81 ವಿದ್ಯುತ್‌ ಕಂಬಗಳು ಮಳೆಯಿಂದ ಹಾನಿಗೊಳಗಾಗಿವೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಕೇಂದ್ರ (ಎಸ್‌ಇಒಸಿ) ತಿಳಿಸಿದೆ.

ಈ ವರ್ಷ ಮುಂಗಾರು ಆರಂಭವಾದಾಗಿನಿಂದ (ಜೂನ್ 20) ಈವರೆಗೆ ಮಳೆ ಸಂಬಂಧಿತ ಘಟನೆಗಳಲ್ಲಿ 67 ಮತ್ತು ರಸ್ತೆ ಅಪಘಾತಗಳಲ್ಲಿ 45 ಮಂದಿ ಸೇರಿದಂತೆ ಒಟ್ಟು 112 ಜನ ಪ್ರಾಣ ಕಳೆದುಕೊಂಡಿದ್ದಾರೆ. 199ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, 35 ಮಂದಿ ಇನ್ನೂ ಕಾಣೆಯಾಗಿದ್ದಾರೆ ಎಂದು ಎಸ್‌ಇಒಸಿ ತಿಳಿಸಿದೆ.

ADVERTISEMENT

ಈ ವರ್ಷದ ಮಳೆಗಾಲದಲ್ಲಿ ರಾಜ್ಯದಲ್ಲಿ 31 ಹಠಾತ್‌ ಪ್ರವಾಹಗಳು, 22 ಮೇಘಸ್ಫೋಟಗಳು ಹಾಗೂ 19 ಕಡೆ ಭೂಕುಸಿತಗಳು ಸಂಭವಿಸಿವೆ. ಇದರಿಂದ ಒಟ್ಟಾರೆ ₹1,220 ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.