ADVERTISEMENT

ಕೋವಿಡ್‌: ಹಿಮಾಚಲ ಪ್ರದೇಶದ ಬಿಜೆಪಿ ಶಾಸಕ ನರೀಂದರ್‌ ಬರಾಗಟಾ ನಿಧನ

ಪಿಟಿಐ
Published 5 ಜೂನ್ 2021, 5:17 IST
Last Updated 5 ಜೂನ್ 2021, 5:17 IST
ನರೀಂದರ್‌ ಬರಾಗಟಾ - ಟ್ವಿಟರ್‌ ಚಿತ್ರ
ನರೀಂದರ್‌ ಬರಾಗಟಾ - ಟ್ವಿಟರ್‌ ಚಿತ್ರ   

ಶಿಮ್ಲಾ: ‘ಹಿಮಾಚಲ ಪ್ರದೇಶ ವಿಧಾನಸಭೆಯ ಮುಖ್ಯ ಸಚೇತಕ ಮತ್ತು ಬಿಜೆಪಿ ಶಾಸಕ ನರೀಂದರ್‌ ಬರಾಗಟಾ ಅವರು (68) ಕೋವಿಡ್‌ನಿಂದಾಗಿ ಇಲ್ಲಿನ ಪಿಜಿಐ ಚಂಡೀಗಡ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು’ ಎಂದು ಅವರ ಮಗ ಚೇತನ್‌ ಬರಾಗಟಾ ಟ್ವೀಟ್‌ ಮಾಡಿದ್ದಾರೆ.

ನರೀಂದರ್‌ ಅವರು ಜುಬ್ಬಲ್‌ ಕೊಟ್ಕಾಯಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ನರೀಂದರ್‌ ಅವರ ಆರೋಗ್ಯ ವಿಚಾರಿಸಲು ಮುಖ್ಯಮಂತ್ರಿ ಜಯರಾಮ್‌ ಠಾಕೂರ್‌ ಅವರು ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿದ್ದರು.

ADVERTISEMENT

ಅವರು ತೋಟಗಾರಿಕೆ, ತಂತ್ರಜ್ಞಾನ ಶಿಕ್ಷಣ ಮತ್ತು ಆರೋಗ್ಯ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

ನರೀಂದ್ರ್‌ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ಅಲ್ಲಿನ ಸಿ.ಎಂ ಜಯರಾಮ್‌ ಠಾಕೂರ್‌, ‘ನರೀಂದರ್‌ ಅವರ ಸಾವು ಹಿಮಾಚಲ ಪ್ರದೇಶಕ್ಕೆ ತುಂಬಲಾಗದ ನಷ್ಟ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.