ADVERTISEMENT

ಹಿಮಪಾತದಲ್ಲಿ ಸಿಲುಕಿದ ಏಳು ಸೈನಿಕರು: ರಕ್ಷಣಾ ಕಾರ್ಯಾಚರಣೆ ಆರಂಭ

ರಾಯಿಟರ್ಸ್
Published 7 ಫೆಬ್ರುವರಿ 2022, 11:09 IST
Last Updated 7 ಫೆಬ್ರುವರಿ 2022, 11:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಅರುಣಾಚಲ ಪ್ರದೇಶದ ಕಮೆಂಗ್‌ ಎಂಬಲ್ಲಿ ಭಾನುವಾರ ಸಂಭವಿಸಿದ ಹಿಮಪಾತದಲ್ಲಿ ಭಾರತೀಯ ಸೇನೆಯ (ಗಡಿ ಗಸ್ತು ಪಡೆ) ಏಳು ಸೈನಿಕರು ಸಿಲುಕಿದ್ದಾರೆ. ಸೈನಿಕರನ್ನು ಕಾಪಾಡಲು ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

‘ಗಸ್ತು ಪಡೆಯು ಹಿಮಾಲಯದ ಎತ್ತರದ ಪ್ರದೇಶವಾದ ಕಮೆಂಗ್ ಎಂಬಲ್ಲಿ ಕರ್ತವ್ಯ ನಿರ್ವಹಿಸುತ್ತಿತ್ತು. ಈ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತವಾಗುತ್ತಿದೆ’ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಹರ್ಷ ವರ್ಧನ್ ಪಾಂಡೆ ಹೇಳಿದ್ದಾರೆ.

‘ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ರಕ್ಷಣಾ ತಂಡಕ್ಕೆ ನೆರವಾಗಲು ವಿಶೇಷ ತಂಡಗಳನ್ನು ವಿಮಾನದ ಮೂಲಕ ರವಾನಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

ಕಳೆದ ಕೆಲವು ವರ್ಷಗಳಲ್ಲಿ ಚೀನಾದೊಂದಿಗೆ ಹಲವು ಸಂಘರ್ಷಮಯ ಸನ್ನಿವೇಶಗಳನ್ನು ಎದುರಿಸಿರುವ ಭಾರತವು ಪೂರ್ವ ಹಿಮಾಲಯದ ಅರುಣಾಚಲ ಪ್ರದೇಶದಲ್ಲಿ ಗಸ್ತು ತೀವ್ರಗೊಳಿಸಿದೆ. ರಸ್ತೆಗಳು ಮತ್ತು ಸುರಂಗಗಳ ನಿರ್ಮಾಣವನ್ನು ಹೆಚ್ಚಿಸಿದೆ. ಅರುಣಾಚಲವು ಟಿಬೆಟ್‌ನೊಂದಿಗೆ ಗಡಿ ಹಂಚಿಕೊಂಡಿದೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.