ADVERTISEMENT

ಹೇಗಾದರೂ ಮಾಡಿ ಹಿಂದಿ ಹೇರಲು ಕೇಂದ್ರದಿಂದ ತ್ರಿಭಾಷಾ ಸೂತ್ರ, NEET: ಉದಯನಿಧಿ

ಪಿಟಿಐ
Published 20 ಏಪ್ರಿಲ್ 2025, 11:43 IST
Last Updated 20 ಏಪ್ರಿಲ್ 2025, 11:43 IST
<div class="paragraphs"><p>ಉದಯನಿಧಿ ಸ್ಟಾಲಿನ್</p></div>

ಉದಯನಿಧಿ ಸ್ಟಾಲಿನ್

   

– ಪಿಟಿಐ ಚಿತ್ರ

ಚೆನ್ನೈ: ಹೇಗಾದರೂ ಮಾಡಿ ಹಿಂದಿ ಹೇರಿಕೆ ಮಾಡಬೇಕು ಎಂದೇ ತ್ರಿಭಾಷಾ ಸೂತ್ರ, ನೀಟ್ ಹಾಗೂ ನೂತನ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗುತ್ತಿದೆ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಭಾನುವಾರ ಹೇಳಿದ್ದಾರೆ.

ADVERTISEMENT

ಕೇಂದ್ರ ಸರ್ಕಾರದ ಸಂಚಿನ ಬಗ್ಗೆ ಎಚ್ಚರಿಕೆಯಿಂದರಿ ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದ ಅವರು, ಸಿ.ಇ.ಟಿ ಹಾಗೂ ತ್ರಿಭಾಷಾ ಸೂತ್ರದಿಂದ ತಮಿಳುನಾಡಿನ ಶಿಕ್ಷಣ ನೀತಿಗೆ ಕೇಂದ್ರ ಸರ್ಕಾರ ಅಪಾಯವನ್ನುಂಟು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಶಿಕ್ಷಣದ ಮೇಲೆ ಕೇಂದ್ರ ಸರ್ಕಾರ ರೂಪಿಸಿದ ಸಂಚು ಹಾಗೂ ‌ಮಾಡಿದ ಅಪಾಯವನ್ನು ನೀವು ಅರಿತುಕೊಳ್ಳಬೇಕು. ನೀವು ನಿಮ್ಮ ನಿರ್ಧಾರದಲ್ಲಿ ಅಚಲವಾಗಿ ನಿಲ್ಲಬೇಕು. ವಿರೋಧಿಗಳಿಗೆ ಗೆಲುವಾಗಬಾರದು ಎಂದು ಹೇಳಿದ್ದಾರೆ.

ಇಲ್ಲಿನ ನಂದನಂ ಕಲಾ ಕಾಲೇಜಿನಲ್ಲಿ ₹ 4.80 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾದ ಸಾವಿರ ಆಸನ ಸಾಮರ್ಥ್ಯದ ಸಭಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಗೌರವಾರ್ಥವಾಗಿ ಈ ಸಭಾಂಗಣಕ್ಕೆ ‘ಕಲೈನಾರ್ ಕಲೈರಂಗಂ’ ಎಂದು ಹೆಸರಿಡಲಾಗಿದೆ.

1986 ರಲ್ಲಿ ರಾಜ್ಯದಲ್ಲಿ ಹಿಂದಿ ಹೇರಿಕೆಯಾದಾಗ ಇಲ್ಲಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದನ್ನು ಅವರು ಇದೇ ವೇಳೆ ನೆನಪಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.