ADVERTISEMENT

ಎನ್‌ಇಪಿ | ಮಹಾರಾಷ್ಟ್ರದಲ್ಲಿ ಮರಾಠಿ ಕಡೆಗಣನೆ ಸಹಿಸಲಾಗದು: ಸುಳೆ

ಪಿಟಿಐ
Published 19 ಏಪ್ರಿಲ್ 2025, 13:57 IST
Last Updated 19 ಏಪ್ರಿಲ್ 2025, 13:57 IST
<div class="paragraphs"><p>ಸುಪ್ರಿಯಾ ಸುಳೆ </p></div>

ಸುಪ್ರಿಯಾ ಸುಳೆ

   

–ಪಿಟಿಐ ಚಿತ್ರ

ಪುಣೆ/ಮುಂಬೈ: ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಬಲವಂತವಾಗಿ ಜಾರಿ ಮಾಡುವಾಗ ಮರಾಠಿ ಭಾಷೆ ಕಡೆಗಣಿಸುವುದನ್ನು ಸಹಿಸಲು ಆಗದು ಎಂದು ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ ಹೇಳಿದ್ದಾರೆ.

ADVERTISEMENT

ರಾಜ್ಯದ ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ತೃತೀಯ ಭಾಷೆಯನ್ನಾಗಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ.

ಎನ್‌ಇಪಿ ಜಾರಿಗೆ ಸರ್ಕಾರವು ಅವಸರ ಮಾಡಬಾರದು. ಏಕೆಂದರೆ ಅದರಿಂದ ವಿದ್ಯಾರ್ಥಿಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ, ಬದಲಾವಣೆಗೆ ಶಿಕ್ಷಕರು ಸಿದ್ಧರಾಗಿಲ್ಲ ಎಂದು ಸುಳೆ ಹೇಳಿದ್ದಾರೆ.

ಉದ್ಧವ್ ಕಿಡಿ: ಮಹಾರಾಷ್ಟ್ರದಲ್ಲಿ ಹಿಂದಿಯನ್ನು ಕಡ್ಡಾಯವಾಗಿಸಲು ಅವಕಾಶ ಕೊಡುವುದಿಲ್ಲ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. ಹಿಂದಿಯ ಬಗ್ಗೆ ತಮ್ಮ ಪಕ್ಷಕ್ಕೆ ಜುಗುಪ್ಸೆ ಇಲ್ಲ, ಆದರೆ ಅದನ್ನು ಒತ್ತಾಯವಾಗಿ ಕಲಿಸಲು ಮುಂದಾಗಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಈವರೆಗೆ ಎರಡು ಭಾಷೆಗಳನ್ನು ಮಾತ್ರ ಕಲಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.