ಹ್ಯೂಸ್ಟನ್: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಅಮೆರಿಕದ ಹಿಂದೂ ಸಮುದಾಯವು ಇಲ್ಲಿ ಬೃಹತ್ ಕಾರ್ ರ‍್ಯಾಲಿ ನಡೆಸಿತು.
ಈ ಸಂದರ್ಭದಲ್ಲಿ 11 ದೇಗುಲಗಳ ಎದುರು ಕಾರುಗಳನ್ನು ನಿಲ್ಲಿಸಿ ಸದಸ್ಯರು ಭಜನೆ ಮಾಡಿ, ‘ಜೈ ಶ್ರೀರಾಮ್’ ಘೋಷಣೆ ಕೂಗಿದರು.
ಜ.22ರಂದು ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಅಮೆರಿಕದ ವಿಶ್ವ ಹಿಂದೂ ಪರಿಷತ್, ದೇಗುಲಗಳ ಅಧಿಕಾರಿಗಳಿಗೆ ಆಹ್ವಾನ ನೀಡಿತು.
ಕೇಸರಿ ಬ್ಯಾನರ್‌ಗಳ ಜೊತೆಗೆ ರಾಮ ಮಂದಿರದ ಚಿತ್ರಗಳು ಮತ್ತು ಭಾರತ–ಅಮೆರಿಕ ಧ್ವಜ ಹಿಡಿದು 500ಕ್ಕೂ ಹೆಚ್ಚು ಸವಾರರು ರ‍್ಯಾಲಿಯಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.