ADVERTISEMENT

ಅನ್ಯಧರ್ಮೀಯರಿಗೆ ಹಿಂದೂ ಧರ್ಮಕ್ಕೆ ಸ್ವಾಗತ: ಟಿಟಿಡಿ

ಪಿಟಿಐ
Published 4 ಫೆಬ್ರುವರಿ 2024, 15:57 IST
Last Updated 4 ಫೆಬ್ರುವರಿ 2024, 15:57 IST
..
..   

ಹೈದರಾಬಾದ್‌: ‘ಹಿಂದೂ ಧರ್ಮ ಪಾಲಿಸಲು ಸ್ವಇಚ್ಛೆಯಿಂದ ಮುಂದೆ ಬರುವ ಅನ್ಯಧರ್ಮೀಯರನ್ನು ನಾವು ಸ್ವಾಗತಿಸುತ್ತೇವೆ’ ಎಂದು ತಿರುಮಲ ತಿರುಪತಿ ದೇವಸ್ಥಾನಮ್‌ (ಟಿಟಿಡಿ) ಭಾನುವಾರ ಹೇಳಿದೆ. ಅಲ್ಲದೇ, ಹಿಂದೂ ಧರ್ಮಕ್ಕೆ ಅವರು ಹೊಂದಿಕೊಳ್ಳುವಂತೆ ಮಾಡಲು ಸೂಕ್ತ ವ್ಯವಸ್ಥೆಯನ್ನೂ ತಿರುಮಲದಲ್ಲಿ ರೂಪಿಸಲಾಗುತ್ತದೆ ಎಂದು ತಿಳಿಸಿದೆ. 

ಇಲ್ಲಿ ನಡೆಯುತ್ತಿರುವ ಹಿಂದೂ ಧಾರ್ಮಿಕ ಸಮಾವೇಶ ‘ಧಾರ್ಮಿಕ ಸದಸ್‌’ನ ಎರಡನೇ ದಿನವಾದ ಭಾನುವಾರ ಟಿಟಿಡಿ ಈ ವಿಷಯ ತಿಳಿಸಿದೆ.

ಬೇರೆ ಧರ್ಮಗಳಿಗೆ ಮತಾಂತರ ಆಗಿರುವ ಹಿಂದೂಗಳನ್ನು ‘ಘರ್‌ ವಾಪಸಿ’ ಮಾಡಬೇಕು ಎಂದು ಮಠಾಧಿಪತಿಯೊಬ್ಬರು ಆಗ್ರಹಿಸಿದರೆ, ಮತಾಂತರ ತಡೆಯಲು ವ್ಯವಸ್ಥೆ ರೂಪಿಸಬೇಕು ಎಂದು ಟಿಟಿಡಿಯನ್ನು ಮತ್ತೊಬ್ಬರು ಒತ್ತಾಯಿಸಿದರು. 

ADVERTISEMENT

ಹಿಂದೂ ಧರ್ಮವನ್ನು ಹೆಚ್ಚು ಜನರತ್ತ ಮತ್ತು ತಳವರ್ಗಗಳತ್ತ ಕೊಂಡೊಯ್ಯಬೇಕು. ಧರ್ಮದ ವಿವಿಧ ಪಂಥಗಳಲ್ಲಿ ಒಗ್ಗಟ್ಟು ಮೂಡಿಸಬೇಕು ಎಂಬ ವಿಷಯಗಳು ಮುಖ್ಯವಾಗಿ ಚರ್ಚೆಗೆ ಒಳಗಾದವು.

‘ಹಿಂದೂ ಸನಾತನ ಧರ್ಮವು ಜಗತ್ತಿನಲ್ಲೇ ಅತ್ಯಂತ ಹಳೆಯ ಧಾರ್ಮಿಕ ನಂಬಿಕೆಯಾಗಿದೆ. ಅದು ಜನರನ್ನು ಸರಿಯಾದ ಜೀವನಕ್ರಮದ ಕಡೆಗೆ ಕೊಂಡೊಯ್ಯುತ್ತದೆ. ಹಿಂದೂ ಸನಾತನ ಧರ್ಮವನ್ನು ರಕ್ಷಿಸುವ ಮತ್ತು ಪ್ರಚುರ ಪಡಿಸುವ ನಮ್ಮ ಪ್ರಮುಖ ಉದ್ದೇಶದ ಭಾಗವಾಗಿ, ಹಿಂದೂ ಜೀವನ ಕ್ರಮ ಅಳವಡಿಸಿಕೊಳ್ಳಲು ಬಯಸುವ ಅನ್ಯಧರ್ಮೀಯರಿಗೆ ಸಂಪ್ರದಾಯಗಳು ಮತ್ತು ಧಾರ್ಮಿಕ ವಿಷಯಗಳ ಕುರಿತು ತರಬೇತಿ ನೀಡುತ್ತೇವೆ’ ಎಂದು ಟಿಟಿಡಿ ಮುಖ್ಯಸ್ಥ ಭೂಮನ ಕರುಣಾಕರ ರೆಡ್ಡಿ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.