ADVERTISEMENT

ಎಚ್‌ಐವಿ ಸೋಂಕಿತ ಬಾಲಕನಿಗೆ ಪ್ರವೇಶ ನಿರಾಕರಣೆ ಆರೋಪ: ತನಿಖೆಗೆ ಸೂಚನೆ

ತಮಿಳುನಾಡಿನ ಪೆರಂಬುಲುರು ಜಿಲ್ಲೆಯಲ್ಲಿ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 18:39 IST
Last Updated 12 ಜುಲೈ 2019, 18:39 IST
   

ತಿರುಚಿರಾಪಳ್ಳಿ (ತಮಿಳುನಾಡು): ಪೆರಂಬುಲೂರು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಚ್‌ಐವಿಪೀಡಿತ ಬಾಲಕನಿಗೆ ಪ್ರವೇಶ ನಿರಾಕರಿಸಲಾಗಿದ್ದು, ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ತಮಿಳುನಾಡು ಶಿಕ್ಷಣ ಇಲಾಖೆ ಆದೇಶಿಸಿದೆ.

ಶಾಲಾ ಶಿಕ್ಷಣ ನಿರ್ದೇಶಕ ಎಸ್. ಕಣ್ಣಪ್ಪನ್ ಅವರು, ಬಾಲಕನ ಪ್ರವೇಶ ನಿರಾಕರಣೆಯ ಕುರಿತು ವರದಿ ಸಲ್ಲಿಸುವಂತೆ ಪೆರಂಬುಲೂರು ಜಿಲ್ಲಾ ಮುಖ್ಯ ಶಿಕ್ಷಣಾಧಿಕಾರಿಗೆ ಸೂಚಿಸಿದ್ದಾರೆ.

ಜಿಲ್ಲೆಯ ಪಕ್ಕದಲ್ಲೇ ಇರುವ ಕೊಲಕ್ಕನಾಥನ್‌ನಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಪ್ರವೇಶ ಕೋರಿ ವಾರದ ಹಿಂದೆ ಬಾಲಕ ಅರ್ಜಿ ಸಲ್ಲಿಸಿದ್ದ. ಆದರೆ, ಬುಧವಾರ ಬಾಲಕನಿಗೆ ಪ್ರವೇಶ ದೊರೆಯದೇ ಹಿಂತಿರುಗಿದ ಎನ್ನಲಾಗಿದೆ.

ADVERTISEMENT

ಬಾಲಕನ ಶೈಕ್ಷಣಿಕ ಸಾಧನೆ ಕಳಪೆ ಎಂಬ ಕಾರಣಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಇದೇ ವಿಷಯವಾಗಿ ಮುಖ್ಯೋಪಾಧ್ಯಾಯ ಮತ್ತು ಬಾಲಕನ ಸಂಬಂಧಿಕರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.

ಆದರೆ, ಮುಖ್ಯೋಪಾಧ್ಯಾಯ ಬಾಲಕನಿಗೆ ಶಾಲಾ ಪ್ರವೇಶ ನಿರಾಕರಿಸಿಲ್ಲ ಎಂದಿದ್ದಾರೆ. ‘ಬಾಲಕ ಬಯಸಿದಲ್ಲಿ ಪ್ರವೇಶ ನೀಡಲಾಗುವುದು’ ಎಂದು ಮುಖ್ಯೋಪಾಧ್ಯಾಯ ಮತ್ತು ಮುಖ್ಯ ಶಿಕ್ಷಣಾಧಿಕಾರಿ ಅರುಲ್ ರಂಗನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.