ADVERTISEMENT

ಕೇರಳ: ಕೋವಿಡ್‌-19 ಚಿಕಿತ್ಸೆಗೆ ಎಚ್ಐವಿ ತಡೆ ಔಷಧಿ ಪರಿಣಾಮಕಾರಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 5:28 IST
Last Updated 27 ಮಾರ್ಚ್ 2020, 5:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ:ಕೋವಿಡ್–19 ಪೀಡಿತರಾಗಿದ್ದ ವ್ಯಕ್ತಿಯೊಬ್ಬರಿಗೆ ಎಚ್‌ಐವಿ ನಿರೋಧಕ ಔಷಧಿ ನೀಡಲಾಗಿದ್ದು, ಅವರು ಗುಣಮುಖರಾಗಿದ್ದಾರೆ.

ಬ್ರಿಟಿಷ್‌ ಪ್ರಜೆಯಾಗಿರುವ ಇವರು, ಕೇರಳದ ಮುನ್ನಾರ್‌ಗೆ ಪ್ರವಾಸಕ್ಕೆಂದು ಬಂದಿದ್ದರು.ಇವರ ಜೊತೆಗೆ 17 ಪ್ರವಾಸಿಗರಿದ್ದರು.ಅದರಲ್ಲಿ ಆರು ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.‘ಕೋವಿಡ್‌ ಪೀಡಿತರಾಗಿದ್ದ ವ್ಯಕ್ತಿಗೆ 60 ವರ್ಷ ವಯಸ್ಸಾಗಿದ್ದು, ಎಚ್‌ಐವಿ ಸೋಂಕಿತರಿಗೆ ನೀಡುವ ಔಷಧಿಯನ್ನು ನೀಡಲಾಗಿತ್ತು. ಅವರು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಮೂರನೇ ದಿನಕ್ಕೆ ಕೊರೊನಾ ಸೋಂಕು ಪರೀಕ್ಷಾ ವರದಿ ನೆಗೆಟಿವ್ ಬಂದಿದೆ’ ಎಂದು ಕೊಚ್ಚಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಐಸಿಎಂಆರ್ ಮಾರ್ಗಸೂಚಿಗಳ ಪ್ರಕಾರ, ಕೋವಿಡ್‌ ಪೀಡಿತ ಬ್ರಿಟಿಷ್‌ ಪ್ರಜೆಗೆನೀಡಿರುವ ಎಚ್‌ಐವಿ ಔಷಧಿಗಳ ಸಂಯೋಜನೆಯನ್ನು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಶ್ವಾಸಕೋಶದ ಸೋಂಕಿನಂತಹ ತೀವ್ರವಾದ ಉಸಿರಾಟದ ಸಮಸ್ಯೆಗಳನ್ನು ಹೊಂದಿರುವವರಿಗೆ ಮಾತ್ರ ಬಳಸಬಹುದಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.