ಪ್ರಾತಿನಿಧಿಕ ಚಿತ್ರ
ನವದೆಹಲಿ: ಹೋಳಿ ಸಂಭ್ರಮಾಚರಣೆ ವೇಳೆ ಬಣ್ಣ ಎರಚಿದ ವಿಚಾರವಾಗಿ ವಾಗ್ವಾದ ನಡೆದು ವ್ಯಕ್ತಿಯೊಬ್ಬರನ್ನು ಥಳಿಸಿರುವ ಘಟನೆ ರಾಷ್ಟ್ರ ರಾಜಧಾನಿಯ ಕೈಲಾಶ್ ಪ್ರದೇಶದಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿಯ ಮೇಲೆ ಆರೋಪಿ ಬಣ್ಣ ಎರಚಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಆರಂಭವಾಗಿತ್ತು ಎಂದಿದ್ದಾರೆ.
ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಬಣ್ಣ ಎರಚಿದ ವ್ಯಕ್ತಿಯೇ ಸಂತ್ರಸ್ತ ವ್ಯಕ್ತಿಯನ್ನು ಥಳಿಸಿದ್ದ. ಗಲಾಟೆ ಜೋರಾಗುತ್ತಿದ್ದಂತೆ, ಅಕ್ಕಪಕ್ಕ ಇದ್ದ ಕೆಲವರೂ ಆರೋಪಿಯೊಂದಿಗೆ ಸೇರಿ ಹಲ್ಲೆ ಮಾಡಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಸ್ಥಳೀಯರು, ಸಂತ್ರಸ್ತನನ್ನು ರಕ್ಷಿಸಿದ್ದಾರೆ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.