ಹೋಳಿ
ನವದೆಹಲಿ: ಹೋಳಿಯ ದಿನವಾದ ಇಂದು (ಗುರುವಾರ) ರಾಜಸ್ಥಾನದಲ್ಲಿ ಬಣ್ಣ ಎರಚುವ ಸಂಬಂಧ ನಡೆದ ಗಲಾಟೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ.
ರಾಜಸ್ಥಾನದ ರಾಲ್ವಾಸ್ ನಗರದಲ್ಲಿ ಈ ಘಟನೆ ನಡೆದಿದೆ. ಗ್ರಂಥಾಲಯದ ಆವರಣದಲ್ಲಿ ಕುಳಿತಿದ್ದ ಹಂಸರಾಜ್ ಎಂಬ ಯುವಕನ ಮೇಲೆ ಮೂವರು ವ್ಯಕ್ತಿಗಳು ಬಣ್ಣ ಎರಚಿದ್ದರು. ಇದಕ್ಕೆ ಹಂಸರಾಜ್ ವಿರೋಧ ವ್ಯಕ್ತಪಡಿಸಿದ್ದರಿಂದ ಅವರು ಹಲ್ಲೆ ಮಾಡಿದ್ದರು.
ತೀವ್ರ ಆಸ್ವಸ್ಥಗೊಂಡಿದ್ದ ಹಂಸರಾಜ್‌ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಸಂಬಂಧ ಮೂವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶ ವರದಿ: ಮಥುರಾದಲ್ಲಿ ಹೋಳಿಯಾಡುವ ಸಂದರ್ಭದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಇಬ್ಬರು ಯುವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.