ADVERTISEMENT

Dhankhar Resigns | ಧನಕರ್ ರಾಜೀನಾಮೆ ತಕ್ಷಣದಿಂದ ಜಾರಿಗೆ: ಕೇಂದ್ರ ಗೃಹ ಸಚಿವಾಲಯ

ಪಿಟಿಐ
Published 22 ಜುಲೈ 2025, 7:35 IST
Last Updated 22 ಜುಲೈ 2025, 7:35 IST
ಜಗದೀಪ ಧನಕರ್
ಜಗದೀಪ ಧನಕರ್   

ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ತಮ್ಮ ಹುದ್ದೆಗೆ ನೀಡಿದ ರಾಜೀನಾಮೆಯು ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆಯನ್ನು ರಾಜ್ಯಸಭೆಗೆ ಮಂಗಳವಾರ ತಿಳಿಸಲಾಯಿತು.

ಶೂನ್ಯ ವೇಳೆ ಬಳಿಕ ಮಧ್ಯಾಹ್ನ 12ಗಂಟೆಗೆ ರಾಜ್ಯಸಭಾ ಕಲಾಪ ಮತ್ತೆ ಸೇರಿದಾಗ ಪೀಠದಲ್ಲಿದ್ದ ಘನಶ್ಯಾಮ ತಿವಾರಿಯವರು ಗೃಹ ಸಚಿವಾಲಯದ ಅಧಿಸೂಚನೆ ಬಗ್ಗೆ ಸಭೆಗೆ ತಿಳಿಸಿದರು.

‘2025 ಜುಲೈ 22ರ ಅಧಿಸೂಚನೆಯಲ್ಲಿ ಗೃಹ ಸಚಿವಾಲಯವು, ಸಂವಿಧಾನದ 67 (ಎ) ವಿಧಿಯ ಅಡಿಯಲ್ಲಿ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ನೀಡಿದ ರಾಜೀನಾಮೆಯನ್ನು ತಕ್ಷಣಕ್ಕೆ ಜಾರಿಗೆ ಬಂದಿದೆ ಎಂದು ತಿಳಿಸಿದೆ‘ ಎಂದು ತಿವಾರಿ ಘೋಷಿಸಿದರು.

ADVERTISEMENT

ಭಾರತದ ಸಂವಿಧಾನದ ಪ್ರಕಾರ ಉಪರಾಷ್ಟ್ರಪತಿಗಳೇ ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು.

ಧನಕರ್ ಅವರು ಸೋಮವಾರ ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಕಳುಹಿಸಿದ್ದರು.

‘ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ ತಕ್ಷಣವೇ ಜಾರಿಗೆ ಬರುವಂತೆ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ‘ ಎಂದು ಅವರು ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

74 ವರ್ಷದ ಧನಕರ್, ಆಗಸ್ಟ್ 2022 ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.