ADVERTISEMENT

ಹನಿ ಸಿಂಗ್‌ ವಿರುದ್ಧ ಕೌಟುಂಬಿಕ ದೌರ್ಜನ್ಯ: ಗೌಪ್ಯ ವಿಚಾರಣೆಗೆ ಹೈಕೋರ್ಟ್‌ ಅನುಮತಿ

ಪಿಟಿಐ
Published 3 ಸೆಪ್ಟೆಂಬರ್ 2021, 11:07 IST
Last Updated 3 ಸೆಪ್ಟೆಂಬರ್ 2021, 11:07 IST
ಯೋ ಯೋ ಹನಿ ಸಿಂಗ್
ಯೋ ಯೋ ಹನಿ ಸಿಂಗ್   

ನವದೆಹಲಿ:ತಮ್ಮ ವಿರುದ್ಧ ದಾಖಲಿಸಿರುವ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಕ್ಯಾಮರಾ ಎದುರು ಗೌಪ್ಯವಾಗಿ ವಿಚಾರಣೆ ನಡೆಸಬೇಕೆಂದು ಕೋರಿ ಪಂಜಾಬಿ ಗಾಯಕ ಯೋ ಯೋ ಹನಿ ಸಿಂಗ್ ಅವರು ಶುಕ್ರವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈಅರ್ಜಿಯನ್ನು ದೆಹಲಿ ಹೈಕೋರ್ಟ್‌ ಶುಕ್ರವಾರ ಅಂಗೀಕರಿಸಿದೆ.

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ತಾನಿಯಾ ಸಿಂಗ್‌ ಅವರು ಹನಿ ಸಿಂಗ್‌ ಹಾಗೂ ಅವರ ಪತ್ನಿ ಶಾಲಿನಿ ತಲ್ವಾರ್‌ ಅವರನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ದೀರ್ಘ ಕಾಲದವರೆಗೆ ವಿಚಾರಣೆ ನಡೆಸಿದರು.

ಶಾಲಿನಿ ತಲ್ವಾರ್‌ ಅವರು ತಮ್ಮ ಗಂಡ ಹನಿ ಸಿಂಗ್‌ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ ಮತ್ತು ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆಯಡಿ ಹನಿ ಸಿಂಗ್‌ ಅವರಿಂದ ₹20 ಕೋಟಿ ಪರಿಹಾರವನ್ನು ಕೋರಿದ್ದಾರೆ.

ADVERTISEMENT

2011 ಜನವರಿ 23 ರಂದು ಹನಿ ಸಿಂಗ್‌ ಮತ್ತು ಶಾಲಿನಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಶಾಲಿನಿ ಪರ ವಕೀಲ ಸಂದೀಪ್‌ ಕಪೂರ್‌ ಮತ್ತು ಹನಿ ಸಿಂಗ್‌ ಪರ ರೆಬೆಕಾ ಜಾನ್‌ ನ್ಯಾಯಾಲಯದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.