ADVERTISEMENT

ಕೊರೊನಾ ಸೋಂಕಿನ ವಿರುದ್ಧ ಆಂಟಿ ಮೈಕ್ರೋಬ್‌ನ ಪರಿಣಾಮಕಾರಿ ಹೋರಾಟ

ಹಾಂಗ್‌ಕಾಂಗ್‌ ವಿಜ್ಞಾನಿಗಳ ಅಭಿಮತ

ಏಜೆನ್ಸೀಸ್
Published 12 ಅಕ್ಟೋಬರ್ 2020, 6:57 IST
Last Updated 12 ಅಕ್ಟೋಬರ್ 2020, 6:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಂಗ್‌ಕಾಂಗ್: ಪ್ರಾಣಿಗಳಲ್ಲಿನ ಹೊಟ್ಟೆಯ ಹುಣ್ಣು ಹಾಗೂ ಬ್ಯಾಕ್ಟೀರಿಯಾ ಸೋಂಕಿನ ಚಿಕಿತ್ಸೆಗಾಗಿ ಬಳಸುವ ಕೈಗೆಟುಕುವ ಬೆಲೆಯ 'ಆಂಟಿ ಮೈಕ್ರೋಬಿಯಲ್‌’ ಔಷಧ, ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವ ವಿಶ್ವಾಸ ಮೂಡಿಸಿದೆ ಎಂದುಹಾಂಗ್‌ಕಾಂಗ್‌ ವಿಜ್ಞಾನಿಗಳು ತಿಳಿಸಿದ್ದಾರೆ.

ಬ್ಯಾಕ್ಟೀರಿಯಾ ಸೋಂಕಿನ ಚಿಕಿತ್ಸೆಗೆ ಸಾಮಾನ್ಯವಾಗಿ ಬಳಸುವ ಮೆಟಲ್ಲೊಡ್ರಗ್ಸ್ ಎಂಬ ಔಷಧದಲ್ಲಿನ ಲೋಹವನ್ನೊಳಗೊಂಡ ಸಂಯುಕ್ತಗಳು ಕೊರೊನಾ ವೈರಸ್‌ ವಿರುದ್ಧ ಹೋರಾಡುವಂತಹ ವೈರಾಣು ನಿಗ್ರಹ ಗುಣಲಕ್ಷಣಗಳನ್ನು ಹೊಂದಿರಬಹುದೇ ಎಂದು ಪರೀಕ್ಷಿಸಲು ಸಂಶೋಧಕರು ಮುಂದಾದಾಗ, ಈ ಸಕಾರಾತ್ಮಕ ಅಂಶವನ್ನು ಗುರುತಿಸಿದ್ದಾರೆ.

'ಸಿರಿಯನ್ ಹ್ಯಾಮ್‌ಸ್ಟರ್’ ‌(ಇಲಿ ರೀತಿಯ ಪ್ರಾಣಿ) ಮೇಲೆ ಪ್ರಯೋಗಾರ್ಥವಾಗಿ ಬಳಸಿದ ಔಷಧಗಳಲ್ಲಿ, ರ್‍ಯಾಂಟಿಡೈನ್‌ ಬಿಸ್ಮುತ್‌ ಸಿಟ್ರೇಟ್ ‌(ಆರ್‌ಬಿಸಿ) ಎಂಬ ಒಂದು ಔಷಧ ಸಾರ್ಸ್‌ ಕೋವ್‌ 2 ವೈರಸ್ ನಿಗ್ರಹಿಸುವ ಏಜೆಂಟ್‌ ರೀತಿ ಕೆಲಸ ಮಾಡಿದೆ ಎಂದು ಸಂಶೋಧಕರು ಗುರುತಿಸಿದ್ದಾರೆ.

ADVERTISEMENT

'ಸೋಂಕಿತ ಹ್ಯಾಮ್‌ಸ್ಟರ್‌ಗಳಿಗೆ ನೀಡಿದ ಈ ಔಷಧ, ಅವುಗಳ ಶ್ವಾಸಕೋಶದ ಮೇಲಿನ ವೈರಾಣುವಿನ ಸೋಂಕಿನ ಪ್ರಮಾಣವನ್ನು ಹತ್ತು ಪಟ್ಟು ಕಡಿಮೆ ಮಾಡುವಷ್ಟು ಸಮರ್ಥವಾಗಿದೆ’ ಎಂದು ಹಾಂಗ್‌ಕಾಂಗ್‌ ವಿಶ್ವವಿದ್ಯಾಲಯದ ಸಂಶೋಧ ರನ್ನಿಂಗ್ ವಾಂಗ್‌ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

’ನಮ್ಮ ಸಂಶೋಧನೆ ಕೋವಿಡ್‌ 19 ಸೊಂಕಿನ ವಿರುದ್ಧ ಆರ್‌ಬಿಸಿಯು ಸಂಭಾವ್ಯ ವೈರಾಣು ನಿಗ್ರಹ ಏಜೆಂಟ್ ಎಂದು ತೋರಿಸುತ್ತದೆ’ ಎಂದು ವಾಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.