ADVERTISEMENT

2026ರ ವೇಳೆಗೆ ಮೊದಲ ಹಂತದ ಬುಲೆಟ್ ರೈಲು ಯಾನ

ಪಿಟಿಐ
Published 6 ಜೂನ್ 2022, 11:48 IST
Last Updated 6 ಜೂನ್ 2022, 11:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸೂರತ್(ಪಿಟಿಐ):2026ರ ಒಳಗಾಗಿ ಗುಜರಾತ್‌ನ ಸೂರತ್ ಮತ್ತು ಬಿಲಿಮೊರಾ ನಗರಗಳ ಮಧ್ಯೆ ಮೊದಲ ಹಂತದ ಹಾಗೂ ದೇಶದ ಮೊದಲ ಬುಲೆಟ್ ರೈಲು ಸೇವೆ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಆಶಯ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಅಹಮದಾಬಾದ್-ಮುಂಬೈ ಮಧ್ಯೆ ಬುಲೆಟ್ ರೈಲು ಯೋಜನೆಯ ಕಾಮಗಾರಿ ಪರಿಶೀಲನೆಗಾಗಿ ಸೋಮವಾರ ಇಲ್ಲಿಗೆ ಬಂದ ಸಚಿವರು, ‘ಈ ಯೋಜನೆಯ ಮೂಲಭೂತ ಸೌಕರ್ಯ ನಿರ್ಮಾಣದಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ’ ಎಂದು ಹೇಳಿದರು.

ಪ್ರತಿ ಗಂಟೆಗೆ 308 ಕಿ.ಮೀ ವೇಗದಲ್ಲಿ ಚಲಿಸುವ ಬುಲೆಟ್ ರೈಲು ಅಹಮದಾಬಾದ್‌ನಿಂದ 508 ಕಿ.ಮೀ ದೂರದಲ್ಲಿರುವ ಮುಂಬೈ ನಗರವನ್ನು 3 ಗಂಟೆಗಳಲ್ಲಿ ಕ್ರಮಿಸಲಿದೆ. ಪ್ರಸ್ತುತ ಎಕ್ಸ್‌ಪ್ರೆಸ್ ರೈಲುಗಳು 508 ಕಿ.ಮೀ ಕ್ರಮಿಸಲು 6 ಗಂಟೆ ತೆಗೆದುಕೊಳ್ಳುತ್ತಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.