ADVERTISEMENT

ಕೋಲ್ಕತ್ತ: ವಾಸಸ್ಥಳ ದೃಢೀಕರಣ ಪ್ರಮಾಣಪತ್ರಕ್ಕಾಗಿ 18,600 ಅರ್ಜಿ

ಪಿಟಿಐ
Published 9 ಫೆಬ್ರುವರಿ 2026, 15:43 IST
Last Updated 9 ಫೆಬ್ರುವರಿ 2026, 15:43 IST
.
.   

ಕೋಲ್ಕತ್ತ: ಕಳೆದ ಒಂದೂವರೆ ತಿಂಗಳಿನಲ್ಲಿ ವಾಸಸ್ಥಳ ದೃಢೀಕರಣ ಪ್ರಮಾಣಪತ್ರಕ್ಕಾಗಿ 18,600 ಅರ್ಜಿಗಳು ಕೋಲ್ಕತ್ತಾ ನಗರ ಪಾಲಿಕೆಗೆ (ಕೆಎಂಸಿ) ಸಲ್ಲಿಕೆಯಾಗಿವೆ. ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುಂದಾದ ನಂತರದಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುನ್ನ ತಿಂಗಳಿಗೆ ಸರಾಸರಿ 200 ಅರ್ಜಿಗಳಷ್ಟೇ ಸಲ್ಲಿಕೆಯಾಗುತ್ತಿದ್ದವು ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.

ಎಸ್ಐಆರ್‌ ಪ್ರಕ್ರಿಯೆ ಸಂದರ್ಭದಲ್ಲಿ ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರವನ್ನು ಪ್ರಮುಖ ದಾಖಲೆಯಾಗಿ ಪರಿಗಣಿಸುತ್ತಿರುವುದರಿಂದ ಅರ್ಜಿ ಸಲ್ಲಿಸುವವರ ಸಂಖ್ಯೆ ಹಠಾತ್‌ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮತ್ತು ಟಿಎಂಸಿ ಕೌನ್ಸಿಲರ್‌ಗಳು ತಿಳಿಸಿದ್ದಾರೆ.

ADVERTISEMENT

18,400 ಅರ್ಜಿಗಳನ್ನು ಕ್ಷೇತ್ರ ಪರಿಶೀಲನೆಗಾಗಿ ಕೋಲ್ಕತ್ತ ಪೊಲೀಸರಿಗೆ ಕಳುಹಿಸಲಾಗಿತ್ತು. ಈ ಪೈಕಿ 16,555 ಅರ್ಜಿಗಳ ಪರಿಶೀಲನಾ ವರದಿಯನ್ನು ಪೊಲೀಸರು ಸಲ್ಲಿಸಿದ್ದಾರೆ. ಈ ಆಧಾರದಲ್ಲಿ ಕೆಎಂಸಿಯು 14,590 ವಾಸಸ್ಥಳ ದೃಢೀಕರಣ ಪ್ರಮಾಣವನ್ನು ವಿತರಣೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.