ಗಾಂಧೀನಗರ: 2022ರಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ ನೂರು ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್.ಪಾಟೀಲ್ ಹೇಳಿದ್ದಾರೆ.
ಮಂಗಳವಾರ ಹಿಮ್ಮತ್ ನಗರದಲ್ಲಿ ನಡೆದ ‘ಪೇಜ್ ಪ್ರಮುಖ್’ ಕಾರ್ಡ್ ವಿತರಣಾ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಅವರು,ರಾಜ್ಯ ಬಿಜೆಪಿ ಮುಖ್ಯಸ್ಥರು, ’ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಳೆ ಅಭ್ಯರ್ಥಿಗಳನ್ನು ಬದಲಿಸಿ ಕನಿಷ್ಠ ನೂರು ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತದೆ. ಇಲ್ಲಿ ಹಾಜರಿರುವ ಹಾಲಿ ಶಾಸಕರು ಈ ಮಾತನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ,‘ ಎಂದು ಅವರು ಹೇಳಿದರು.
‘ಚುನಾವಣೆಗೆ ಟಿಕೆಟ್ ಬೇಕು ಎಂದು ಯಾರು ನನ್ನ ಬಳಿಗೆ ಬರಬೇಡಿ. ನಿರ್ಧಾರ ಕೈಗೊಳ್ಳುವವರು ಹೈಕಮಾಂಡ್ ನಾಯಕರು. ಯಾರಿಗಾದರೂ ಅಸಮಾಧಾನವಿದ್ದರೆ ಅವರೆಲ್ಲರೂ ನೇರವಾಗಿ ದೆಹಲಿಗೆ ಹೋಗಬಹುದು,’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.