ADVERTISEMENT

ಜಾರ್ಖಂಡ್‌ನಲ್ಲಿ ಈ ವರ್ಷ 397 ಮಾವೋವಾದಿಗಳ ಬಂಧನ, 26 ಮಂದಿ ಶರಣಾಗತಿ

ಪಿಟಿಐ
Published 29 ಡಿಸೆಂಬರ್ 2023, 5:54 IST
Last Updated 29 ಡಿಸೆಂಬರ್ 2023, 5:54 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ರಾಂಚಿ: ರಾಜ್ಯದಲ್ಲಿ ಈ ವರ್ಷ ಒಟ್ಟು 397 ಮಾವೋವಾದಿಗಳನ್ನು ಬಂಧಿಸಲಾಗಿದೆ. 9 ಮಂದಿ ಹತ್ಯೆಯಾಗಿದ್ದು, 26 ಮಂದಿ ಶರಣಾಗಿದ್ದಾರೆ ಎಂದು ಜಾರ್ಖಂಡ್‌ ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ. 

ಬಂಧಿತರಿಂದ 152 ವಿವಿಧ ಶಸ್ತ್ರಾಸ್ತ್ರಗಳು, 10,350 ಮದ್ದುಗುಂಡುಗಳು ಮತ್ತು 244 ಸುಧಾರಿತ ಸ್ಫೋಟಕ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ನೀಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಸರ್ಕಾರ ನಾಲ್ಕು ವರ್ಷ ಪೂರೈಸಿದ ಸಂದರ್ಭದಲ್ಲಿ ಈ ಅಂಕಿ ಅಂಶವನ್ನು ಬಿಡುಗಡೆ ಮಾಡಲಾಗಿದೆ.

ನಿಷೇಧಿತ ಸಂಘಟನೆಗಳಾದ ಸಿಪಿಐ(ಎಂ), ಪಿಎಲ್‌ಇಐ, ಟಿಎಸ್‌ಪಿಸಿ ಹಾಗೂ ಜೆಜೆಎಂಪಿ ಸದಸ್ಯರು ಸೇರಿದಂತೆ ಒಟ್ಟು 1,617 ನಕ್ಸಲರನ್ನು ಕಳೆದ 4 ವರ್ಷಗಳಲ್ಲಿ ಬಂಧಿಸಲಾಗಿದೆ. 40 ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.