ADVERTISEMENT

ಹೈದರಾಬಾದ್: ₹1.03 ಕೋಟಿ ಮೌಲ್ಯದ ವಿದೇಶಿ ಸಿಗರೇಟ್ ವಶ, 5 ಮಂದಿ ಬಂಧನ

ಏಜೆನ್ಸೀಸ್
Published 3 ಜುಲೈ 2020, 15:29 IST
Last Updated 3 ಜುಲೈ 2020, 15:29 IST
ಆರೋಪಿಗಳಿಂದ ವಶಪಡಿಸಿಕೊಂಡ ವಿದೇಶಿ ಸಿಗರೇಟ್ ವೀಕ್ಷಿಸುತ್ತಿರುವ ಹೈದರಾಬಾದ್ ಪೊಲೀಸ್ ಆಯುಕ್ತರು
ಆರೋಪಿಗಳಿಂದ ವಶಪಡಿಸಿಕೊಂಡ ವಿದೇಶಿ ಸಿಗರೇಟ್ ವೀಕ್ಷಿಸುತ್ತಿರುವ ಹೈದರಾಬಾದ್ ಪೊಲೀಸ್ ಆಯುಕ್ತರು    

ಹೈದರಾಬಾದ್: ಅಕ್ರಮವಾಗಿ ಸಂಗ್ರಹಿಸಿ ಸಾಗಿಸಲಾಗುತ್ತಿದ್ದ ವಿದೇಶಿ ಸಿಗರೇಟನ್ನು ನಗರದ ಶಹಿನಾಯತ್‌ಗಂಜ್ ಪೊಲೀಸರು ಪತ್ತೆ ಹಚ್ಚಿರುವುದಲ್ಲದೆ, ಐದು ಮಂದಿಯನ್ನು ಬಂಧಿಸಿ ಅವರಿಂದ ₹1.03 ಕೋಟಿ ಬೆಲೆಯ ಸಿಗರೇಟನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರು ಸಿದ್ದಿಯಾ ಬಜಾರ್ ಸಮೀಪ ಅನುಮಾನಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಆಟೋ ಒಂದನ್ನು ತಡೆದು ತಪಾಸಣೆಗೆ ಒಳಪಡಿಸಿದಾಗ ಅಲ್ಲಿ ವಿದೇಶಿ ಸಿಗರೇಟ್ ಇರುವುದು ಕಂಡು ಬಂತು. ತಪಾಸಣೆ ನಡೆಸಿದಾಗ ಸಿಗರೇಟನ್ನು ಅಕ್ರಮವಾಗಿ ಆಮದು ಮಾಡಿಕೊಂಡು ಮಾರಾಟ ಮಾಡಲು ಸಾಗಿಸಲಾಗುತ್ತಿತ್ತು ಎಂಬ ವಿಷಯ ಬಹಿರಂಗಗೊಂಡಿತು. ಕೂಡಲೆ ಆಟೋ ಚಾಲಕ ಸೇರಿದಂತೆ ಅಕ್ರಮವಾಗಿ ಸಾಗಾಟ ನಡೆಸಲು ಕಾರಣರಾದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ಸಿಗರೇಟನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT