ADVERTISEMENT

ಹೈದರಾಬಾದ್‌: ಮೂರು ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ

ಪಿಟಿಐ
Published 8 ಡಿಸೆಂಬರ್ 2025, 14:41 IST
Last Updated 8 ಡಿಸೆಂಬರ್ 2025, 14:41 IST
   

ಹೈದರಾಬಾದ್‌: ಇಲ್ಲಿನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಆರ್‌ಜಿಐಎ) ಬರುತ್ತಿದ್ದ ಮೂರು ವಿಮಾನಗಳಲ್ಲಿ ಬಾಂಬ್‌ ಇರಿಸಿರುವುದಾಗಿ ದುಷ್ಕರ್ಮಿಗಳು ಬೆದರಿಕೆ ಸಂದೇಶ ಕಳುಹಿಸಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ತಪಾಸಣೆ ನಡೆಸಿದ ಬಳಿಕ ಇದು ಹುಸಿ ಸಂದೇಶ ಎಂಬುದು ದೃಢಪಟ್ಟಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.

ಬ್ರಿಟನ್‌ನ ಹೀಥ್ರೋದಿಂದ ಬರುತ್ತಿದ್ದ ಬ್ರಿಟಿಷ್‌ ಏರ್‌ವೇಸ್‌ನ ವಿಮಾನ (ಬಿಎ277) ಹಾಗೂ ಫ್ರಾಂಕ್‌ಫರ್ಟ್‌ನಿಂದ ಆಗಮಿಸುತ್ತಿದ್ದ ಲುಫ್ತಾನ್ಸಾ (ಎಲ್‌ಎಚ್‌ 752), ಕಣ್ಣೂರಿನಿಂದ ಬರುತ್ತಿದ್ದ ಇಂಡಿಗೊ (6ಇ 7178) ವಿಮಾನಗಳಲ್ಲಿ ಬಾಂಬ್‌ ಇರಿಸಲಾಗಿದೆ ಎಂಬ ಇ–ಮೇಲ್‌ ಸಂದೇಶವನ್ನು ಏರ್‌ಪೋರ್ಟ್‌ನ ಕಸ್ಟಮರ್‌ ಸಪೋರ್ಟ್‌ ವಿಭಾಗಕ್ಕೆ ಭಾನುವಾರ ತಡರಾತ್ರಿ ಕಳುಹಿಸಲಾಗಿತ್ತು. 

ತಕ್ಷಣವೇ ಎಚ್ಚೆತ್ತುಕೊಂಡ ಸಿಬ್ಬಂದಿ ಎಲ್ಲಾ ಆಯಾಮದ ಭದ್ರತಾ ಪರಿಶೀಲನೆಗಳನ್ನು ನಡೆಸಿದ್ದಾರೆ. ಯಾವುದೇ ರೀತಿ ಅನುಮಾನಸ್ಪದ ಸಂಗತಿ, ವಸ್ತು ಕಂಡುಬಂದಿಲ್ಲ. ವಿಮಾನಗಳು ಕೂಡ ಸುರಕ್ಷಿತವಾಗಿ ಲ್ಯಾಂಡ್‌ ಆಗಿವೆ. ಹೀಗಾಗಿ ಬೆದರಿಕೆಯನ್ನು ಹುಸಿ ಸಂದೇಶ ಎಂದು ಪರಿಗಣಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.