ADVERTISEMENT

ಹೈದರಾಬಾದ್‌ ಮೆಟ್ರೊ: 20 ಲಿಂಗತ್ವ ಅಲ್ಪಸಂಖ್ಯಾತರು ಭದ್ರತಾ ಸಿಬ್ಬಂದಿಯಾಗಿ ನೇಮಕ

ಭದ್ರತಾ ಸಿಬ್ಬಂದಿಯಾಗಿ ನೇಮಕಗೊಳಿಸಿ, ಆದೇಶ

ಪಿಟಿಐ
Published 16 ಸೆಪ್ಟೆಂಬರ್ 2025, 16:03 IST
Last Updated 16 ಸೆಪ್ಟೆಂಬರ್ 2025, 16:03 IST
ಹೈದರಾಬಾದ್‌ ಮೆಟ್ರೊ–ಎಎಫ್‌ಪಿ ಚಿತ್ರ
ಹೈದರಾಬಾದ್‌ ಮೆಟ್ರೊ–ಎಎಫ್‌ಪಿ ಚಿತ್ರ   

ಹೈದರಾಬಾದ್‌: ಇಲ್ಲಿನ ಹೈದರಾಬಾದ್‌ ಮೆಟ್ರೊ ರೈಲು ಲಿಮಿಟೆಡ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ 20 ಮಂದಿ ಲಿಂಗತ್ವ ಅಲ್ಪಸಂಖ್ಯಾತರನ್ನು ತೆಲಂಗಾಣ ಸರ್ಕಾರ ನೇಮಿಸಿದೆ.

ಲಿಂಗತ್ವ ಅಲ್ಪಸಂಖ್ಯಾತರ ರಾಜ್ಯ ಸಚಿವ ಅದ್ಲುರಿ ಲಕ್ಷ್ಮಣ್‌ ಕುಮಾರ್‌ ಅವರಿಗೆ ಅರ್ಹರಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು.

‘ಲಿಂಗತ್ವ ಅಲ್ಪಸಂಖ್ಯಾತರು ಕೂಡ ಸ್ವಾಭಿಮಾನದಿಂದ ಬದುಕಬೇಕು ಎಂಬುದು ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿ ಅವರು ಕನಸು. ಘನತೆಯಿಂದ ಬದುಕಲು ರಾಜ್ಯ ಸರ್ಕಾರವು ಎಲ್ಲ ರೀತಿಯ ನೆರವು ನೀಡಲಿದೆ’ ಎಂದು ಅವರು ಹೇಳಿದರು.

ADVERTISEMENT

ಈ ವರ್ಷದ ಜನವರಿ ತಿಂಗಳಲ್ಲಿ 39 ಮಂದಿ ಲಿಂಗತ್ವ ಅಲ್ಪಸಂಖ್ಯಾತರನ್ನು ಟ್ರಾಫಿಕ್‌ ಅಸಿಸ್ಟೆಂಟ್‌ ಆಗಿ ನೇಮಕಗೊಳಿಸಿ ತೆಲಂಗಾಣ ಸರ್ಕಾರ ಕ್ರಮ ಕೈಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.