ADVERTISEMENT

ತಾಂತ್ರಿಕ ದೋಷ: ಸ್ಪೈಸ್‌ಜೆಟ್‌ ವಿಮಾನ ಹೈದರಾಬಾದ್‌ ನಿಲ್ದಾಣಕ್ಕೆ ವಾಪಸ್‌

ಪಿಟಿಐ
Published 19 ಜೂನ್ 2025, 13:24 IST
Last Updated 19 ಜೂನ್ 2025, 13:24 IST
ಸ್ಪೈಸ್‌ಜೆಟ್‌ ವಿಮಾನ– ಸಾಂದರ್ಭಿಕ ಚಿತ್ರ
ಸ್ಪೈಸ್‌ಜೆಟ್‌ ವಿಮಾನ– ಸಾಂದರ್ಭಿಕ ಚಿತ್ರ   

ಹೈದರಾಬಾದ್‌: ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಿರುಪತಿಗೆ ತೆರಳುತ್ತಿದ್ದ ಸ್ಪೈಸ್‌ಜೆಟ್‌ ಸಂಸ್ಥೆಯ ಎಸ್‌ಜಿ 2696 ವಿಮಾನವು ಗುರುವಾರ ತಾಂತ್ರಿಕ ದೋಷದಿಂದಾಗಿ ವಿಮಾನ ನಿಲ್ದಾಣಕ್ಕೆ ವಾಪಸ್‌ ಆಗಿದೆ. ಆದರೆ, ವಿಮಾನ ತುರ್ತು ಭೂಸ್ಪರ್ಶ ಮಾಡಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ  ಈ ಲ್ಯಾಂಡಿಂಗ್ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ. 

ಬೆಳಗ್ಗೆ 6.10ಕ್ಕೆ ಪ್ರಯಾಣ ಆರಂಭಿಸಬೇಕಿದ್ದ ವಿಮಾನವು 6.19ಕ್ಕೆ ಹಾರಾಟ ಆರಂಭಿಸಿತ್ತು. 7.40ಕ್ಕೆ ತಿರುಪತಿಗೆ ತಲುಪಬೇಕಿದ್ದ ವಿಮಾನ ಮಾರ್ಗ ಮಧ್ಯೆಯೇ ತಾಂತ್ರಿಕ ದೋಷ ಎದುರಾಗಿ ಮರಳಿ ಬಂದಿದೆ. ವಿಮಾನದ ಬ್ಯಾಗೇಜ್ ವಿಭಾಗದ ಬಾಗಿಲಿನಲ್ಲಿ ಬೆಳಕು ಬಂದು ಹೋಗಿ ಮಾಡುತ್ತಿದ್ದ ಸಮಸ್ಯೆ ಕಂಡುಬಂದಿತ್ತು. ಆದರೆ, ವಿಮಾನದ ಒಳಗಿನ ಕ್ಯಾಬಿನ್‌ನಲ್ಲಿ ಸ್ಥಿತಿ ಸಹಜವಾಗಿತ್ತು. ಆದಾಗ್ಯೂ, ಮುನ್ನೆಚ್ಚರಿಕೆ ಕ್ರಮವಾಗಿ ವಾಪಸ್ ಬರಲಾಯಿತು ಎಂದು ಸ್ಪೈಸ್‌ಜೆಟ್‌ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT