ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ
X/@MohanMOdisha
ಭುವನೇಶ್ವರ: ‘ನಾನು ಕೂಡ ಚಿಟ್‌ಫಂಡ್ ಹಗರಣಕ್ಕೆ ಬಲಿಪಶುವಾಗಿದ್ದು, ಎರಡು ಬಾರಿ ವಂಚನೆಗೊಳಗಾಗಿದ್ದೇನೆ. ಹಾಗಾಗಿ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಉಳಿಸುವ ಬಗ್ಗೆ ಜಾಗೃತರಾಗಿರಬೇಕು’ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ.
ಭುವನೇಶ್ವರದಲ್ಲಿ ನಡೆದ ರಾಜ್ಯ ಮಟ್ಟದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.
‘ನಾನು ಕೂಡ ಚಿಟ್‌ಫಂಡ್ ಹಗರಣಗಳಿಗೆ ಬಲಿಪಶುವಾಗಿದ್ದೇನೆ. 1990 ಮತ್ತು 2002ರಲ್ಲಿ ಎರಡು ಸಂಸ್ಥೆಗಳು ನನ್ನನ್ನು ವಂಚಿಸಿದ್ದವು. ತಮ್ಮ ಹಣವನ್ನು ಸಂಪೂರ್ಣವಾಗಿ ಹಿಂಪಡೆಯಲು ಸಾಧ್ಯವಾಗಲಿಲ್ಲ’ ಎಂದು ಹೇಳಿದ್ದಾರೆ.
ಪೋಂಜಿ (ನಕಲಿ) ಸಂಸ್ಥೆಗಳ ಏಜೆಂಟ್‌ಗಳು ಹೇಳಿದ್ದ ಮಾತುಕತೆಗಳಿಂದ ಪ್ರಭಾವಿತನಾಗಿದ್ದೆ. ಕೆಲವು ಯೋಜನೆಗಳಲ್ಲಿ ಹಣ ಠೇವಣಿ ಇಡಲು ಹಣವನ್ನು ಹೊಂದಿಸಿದ್ದೆ ಎಂದು ಮಾಝಿ ವಿವರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಹಾಗಾಗಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಮಾಝಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.