ADVERTISEMENT

ನಾನು ಭಾರತದ ದೀರ್ಘಕಾಲದ ಅತಿಥಿ: ದಲೈಲಾಮಾ

ಪಿಟಿಐ
Published 7 ಜುಲೈ 2021, 9:22 IST
Last Updated 7 ಜುಲೈ 2021, 9:22 IST
ದಲೈಲಾಮಾ
ದಲೈಲಾಮಾ   

ಹೈದರಾಬಾದ್‌: ‘ಭಾರತದಲ್ಲಿ ನಾನು ದೀರ್ಘ ಕಾಲದ ಅತಿಥಿಯಾಗಿದ್ದೇನೆ. ನನ್ನ ಆತಿಥೇಯರಿಗೆ ಯಾವುದೇ ತೊಂದರೆ ಕೊಡುವುದಿಲ್ಲ’ ಎಂದು ಟಿಬೆಟ್‌ನ ಆಧ್ಯಾತ್ಮ ಗುರು ದಲೈಲಾಮಾ ಅವರು ಬುಧವಾರ ತಿಳಿಸಿದರು.

ಡಾ. ರೆಡ್ಡೀಸ್‌ ಲ್ಯಾಬ್‌ ಸಹ-ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿ.ವಿ ಪ್ರಸಾದ್‌ ಮತ್ತು ಇತರರೊಂದಿಗೆ ವರ್ಚುವಲ್‌ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ದಲೈಲಾಮಾ,‘ಭಾರತವು ಅಹಿಂಸೆ ಮತ್ತು ಕರುಣೆಯ ತತ್ವವನ್ನು ಪಾಲಿಸುತ್ತದೆ. ನಾನು ಜನಿಸಿದ್ದು ಟಿಬೆಟ್‌ನಲ್ಲಾದರೂ, ಭಾರತ ನನ್ನ ಮನೆಯಾಗಿದೆ. ನನ್ನ ಜೀವನದ ಹೆಚ್ಚಿನ ಸಮಯವನ್ನು ನಾನು ಭಾರತದಲ್ಲಿ ಕಳೆದಿದ್ದೇನೆ. ನಾನು ಭಾರತ ಸರ್ಕಾರದ ಅತಿಥಿ ಎಂದು ಹೇಳಲು ಬಹಳ ಹೆಮ್ಮೆಯಾಗುತ್ತಿದೆ. ಬಹುಶಃ ನಾನು ಭಾರತದ ದೀರ್ಘ ಕಾಲದ ಅತಿಥಿಯಾಗಿದ್ದೇನೆ’ ಎಂದು ಅವರು ಹೇಳಿದರು.

ಭಾರತವನ್ನು ಜಾತ್ಯತೀತ ದೇಶವೆಂದು ಬಣ್ಣಿಸಿದ ಅವರು,‘ಭಾರತದಲ್ಲಿ ಧಾರ್ಮಿಕ ಸಾಮರಸ್ಯ ಮತ್ತು ಮುಕ್ತವಾದ ಮಾಧ್ಯಮ ಸ್ವಾತಂತ್ರ್ಯ ಇದೆ. ನಾನು ಅಹಿಂಸೆ ಮತ್ತು ಸಹಾನುಭೂತಿಯನ್ನು ಪ್ರಚಾರ ಮಾಡುತ್ತೇನೆ. ಇದು ಭಾರತದಲ್ಲಿ ಸಾವಿರಾರು ವರ್ಷಗಳಿಂದ ಇದೆ. ಶತಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತವು ಧಾರ್ಮಿಕ ಸಾಮರಸ್ಯಕ್ಕೆ ಉತ್ತಮ ಉದಾಹರಣೆ. ಭಾರತದ ಧಾರ್ಮಿಕ ಸಾಮರಸ್ಯದ ತತ್ವಗಳನ್ನು ಬೇರೆ ರಾಷ್ಟ್ರಗಳು ಅನುಸರಿಸಬೇಕಾದ ಅವಶ್ಯಕತೆ ಇದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.