ADVERTISEMENT

ಬ್ರಿಟನ್‌ನಿಂದ ಬಂದ ಆಮ್ಲಜನಕ ಸಿಲಿಂಡರ್‌

ಪಿಟಿಐ
Published 4 ಮೇ 2021, 10:17 IST
Last Updated 4 ಮೇ 2021, 10:17 IST
ಬ್ರಿಟನ್‌ನಿಂದ ಚೆನ್ನೈಗೆ ಆಗಮಿಸಿದ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಹೊತ್ತುತಂದ ವಿಮಾನ  –ಪಿಟಿಐ ಚಿತ್ರ
ಬ್ರಿಟನ್‌ನಿಂದ ಚೆನ್ನೈಗೆ ಆಗಮಿಸಿದ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಹೊತ್ತುತಂದ ವಿಮಾನ  –ಪಿಟಿಐ ಚಿತ್ರ   

ಚೆನ್ನೈ: ಬ್ರಿಟನ್‌ನಿಂದ 450 ಖಾಲಿ ಆಮ್ಲಜನಕ ಸಿಲಿಂಡರ್‌ ಸೇರಿದಂತೆ 35 ಟನ್‌ಗಳಷ್ಟು ವೈದ್ಯಕೀಯ ಸಾಧನಗಳನ್ನು ಹೊತ್ತು ತಂದ ವಿಮಾನವು ಮಂಗಳವಾರ ಚೆನ್ನೈನಲ್ಲಿ ಬಂದಿಳಿತು.

ಕೋವಿಡ್‌ ಎರಡನೇ ಅಲೆಯನ್ನು ಎದುರಿಸಲು ಭಾರತಕ್ಕೆ ನೆರವಾಗುವ ನಿಟ್ಟಿನಲ್ಲಿ ಬ್ರಿಟನ್‌ 5,000 ಆಮ್ಲಜನಕ ಸಿಲಿಂಡರ್‌ಗಳನ್ನು ಭಾರತಕ್ಕೆ ನೀಡಿದೆ. ಇದನ್ನು ಭಾರತೀಯ ವಾಯು ಪಡೆಯು(ಐಎಎಫ್‌) ವಿಮಾನಗಳು ಹಂತ ಹಂತವಾಗಿ ಬ್ರಿಟನ್‌ನಿಂದ ಭಾರತಕ್ಕೆ ತರಲಿವೆ.

ತಮಿಳುನಾಡಿನ ಆರೋಗ್ಯ ಇಲಾಖೆಯ ಸಲಹೆಯಂತೆ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಿಗೆ ಇವುಗಳನ್ನು ವಿತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.