ADVERTISEMENT

ಏರ್‌ ಚೀಫ್‌ ಮಾರ್ಷಲ್‌ ಚೌಧರಿ ಶ್ರೀಲಂಕಾ ಭೇಟಿ ಆರಂಭ

ಪಿಟಿಐ
Published 1 ಮೇ 2023, 18:52 IST
Last Updated 1 ಮೇ 2023, 18:52 IST
ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ
ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ   

ಕೊಲಂಬೊ: ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ ಅವರು ಶ್ರೀಲಂಕಾಗೆ ನಾಲ್ಕು ದಿನಗಳ ಅಧಿಕೃತ ಭೇಟಿ ಆರಂಭಿಸಿದ್ದು, ಸೋಮವಾರ ಇಲ್ಲಿಗೆ ಬಂದಿಳಿದರು.

ಭೇಟಿ ವೇಳೆ ಅವರು ದೇಶದ ಪ್ರಮುಖ ರಾಜಕಾರಣಿಗಳು, ಸೇನಾ ನಾಯಕರನ್ನು ಭೇಟಿಯಾಗಿ ದ್ವಿಪಕ್ಷೀಯ ರಕ್ಷಣಾ ಸಹಕಾರ ವೃದ್ಧಿ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಭಾರತ ಹೈಕಮಿಷನ್‌ ಟ್ವೀಟ್‌ ಮಾಡಿದೆ.

ದ್ವೀಪರಾಷ್ಟ್ರದ ಮೇಲೆ ಚೀನಾ ತನ್ನ ಪ್ರಭಾವ ಬೀರಲು ಯತ್ನಿಸುತ್ತಿರುವ ನಡುವೆಯೇ ಚೌಧರಿ ಅವರು ಶ್ರೀಲಂಕಾದ ಪ್ರಮುಖ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.