ADVERTISEMENT

IAF Day 2022: ವಾಯುಪಡೆಗೆ ಮಹಿಳಾ ಅಗ್ನಿವೀರರ ನೇಮಕ: ಏರ್ ಚೀಫ್ ಮಾರ್ಷಲ್

ಪಿಟಿಐ
Published 8 ಅಕ್ಟೋಬರ್ 2022, 13:16 IST
Last Updated 8 ಅಕ್ಟೋಬರ್ 2022, 13:16 IST
ವಿವೇಕ್ ರಾಮ್ ಚೌಧರಿ
ವಿವೇಕ್ ರಾಮ್ ಚೌಧರಿ   

ಚಂಡೀಗಢ: ‘ಭಾರತೀಯ ವಾಯುಪಡೆಯ (ಐಎಎಫ್‌) ಅಧಿಕಾರಿಗಳಿಗಾಗಿ ಶಸ್ತ್ರಾಸ್ತ್ರ ವ್ಯವಸ್ಥೆಯ ಶಾಖೆಯೊಂದನ್ನು ಸ್ಥಾಪಿಸುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರಿಂದ ವಿಮಾನ ಹಾರಾಟ ತರಬೇತಿಗೆ ತಗಲುವ ₹3,400 ಕೋಟಿ ಮೊತ್ತ ಉಳಿತಾಯವಾಗಲಿದೆ’ ಎಂದು ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ ಹೇಳಿದ್ದಾರೆ.

ಐಎಎಫ್‌ನ 90ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಇಲ್ಲಿನ ವಾಯುಪಡೆ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮುಂದಿನ ವರ್ಷದಿಂದ ಐಎಎಫ್‌ಗೆ ಮಹಿಳಾ ಅಗ್ನಿವೀರರನ್ನು ನೇಮಿಸಿಕೊಳ್ಳಲು ಚಿಂತಿಸಲಾಗಿದ್ದು, ಈ ಕುರಿತು ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಸ್ವಾತಂತ್ರ್ಯ ನಂತರದಲ್ಲಿ ಇದೇ ಮೊದಲ ಬಾರಿಗೆಶಸ್ತ್ರಾಸ್ತ್ರ ವ್ಯವಸ್ಥೆಯ ಶಾಖೆಯೊಂದನ್ನು ಸ್ಥಾಪಿಸಲಾಗುತ್ತಿದೆ.ಖಂಡಾಂತರ ಕ್ಷಿಪಣಿ, ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ, ದೂರ ನಿಯಂತ್ರಿತ ಯುದ್ಧ ವಿಮಾನ ಹಾಗೂ ಅವಳಿ ಹಾಗೂ ಬಹು ಸಿಬ್ಬಂದಿ ವಿಮಾನಗಳನ್ನು ಈ ವ್ಯವಸ್ಥೆಯು ಒಳಗೊಂಡಿರಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ತುರ್ತು ನಿರ್ಧಾರ ಕೈಗೊಳ್ಳಲು ಹಾಗೂ ದೊಡ್ಡ ಪ್ರಮಾಣದ ದತ್ತಾಂಶಗಳ ವಿಶ್ಲೇಷಣೆಗಾಗಿ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಯಾಂತ್ರೀಕೃತ ಸಾಮರ್ಥ್ಯ, ದತ್ತಾಂಶ ವಿಶ್ಲೇಷಣೆ ಮತ್ತು ಕೃತಕ ಬುದ್ಧಿಮತ್ತೆಯ ಸೂಕ್ತ ಬಳಕೆಯೊಂದಿಗೆ ನಮ್ಮ ಕಾರ್ಯತಂತ್ರವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಲಾಗುತ್ತದೆ. ಈ ಕುರಿತ ಯೋಜನೆಗಳು ಈಗಾಗಲೇ ಪ್ರಗತಿಯಲ್ಲಿವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.