ADVERTISEMENT

ಅರುಣಾಚಲ ಪ್ರದೇಶದಲ್ಲಿ ಏರ್‌ ಶೋ ಏರ್ಪಡಿಸಬಹುದು: ಎಸ್‌.ಪಿ.ಧರ್ಕರ್

ಪಿಟಿಐ
Published 15 ಅಕ್ಟೋಬರ್ 2023, 14:38 IST
Last Updated 15 ಅಕ್ಟೋಬರ್ 2023, 14:38 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗುವಾಹಟಿ: ಭಾರತೀಯ ವಾಯುಪಡೆಯು ಅರುಣಾಚಲ ಪ್ರದೇಶದಲ್ಲಿ ವೈಮಾನಿಕ ಪ್ರದರ್ಶನವನ್ನು ನಡೆಸಬಹುದು. ಇದು ಚೀನಾ‌ದೊಂದಿಗೆ ಗಡಿ ಹಂಚಿಕೊಂಡಿರುವ ಮತ್ತು ಅತ್ಯಂತ ಆಯಕಟ್ಟಿನ ರಾಜ್ಯದಲ್ಲಿ ವಾಯುಪಡೆಯು ನಡೆಸುವ ಮೊದಲ ವೈಮಾನಿಕ ಪ್ರದರ್ಶನವಾಗಿರಲಿದೆ ಎಂದು ಏರ್‌ ಮಾರ್ಷಲ್ ಎಸ್‌.ಪಿ.ಧರ್ಕರ್ ಭಾನುವಾರ ತಿಳಿಸಿದ್ದಾರೆ.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಭವಿಷ್ಯದಲ್ಲಿ ಅರುಣಾಚಲ ಪ್ರದೇಶದ ಕೆಲ ಭಾಗದಲ್ಲಿ ವೈಮಾನಿಕ ಪ್ರದರ್ಶನ ಏರ್ಪಡಿಸಬಹುದು’ ಎಂದು ಹೇಳಿದರು.

ADVERTISEMENT

‘ಗುಡ್ಡಗಾಡು ಪ್ರದೇಶಗಳಿರುವ ಅರುಣಾಚಲ ಪ್ರದೇಶದಂಥ ರಾಜ್ಯ‌ದಲ್ಲಿ ವೈಮಾನಿಕ ಪ್ರದರ್ಶನ ಏರ್ಪಡಿಸುವುದು ಅತ್ಯಂತ ಸವಾಲಿನ ಕೆಲಸ. ಆದರೆ ಇದು ಅತ್ಯಂತ ಕುತೂಹಲಕಾರಿ’ ಎಂದು ಪೂರ್ವ ಏರ್ ಕಮಾಂಡ್‌ನ ಮುಖ್ಯಸ್ಥರೂ ಆಗಿರುವ ಧರ್ಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.