ADVERTISEMENT

ಜೀವ ವೈದ್ಯಕೀಯ ಸಂಶೋಧನೆಗೆ ಕೇಂದ್ರ; ಪ್ರಾಣಿಗಳ ಬಳಕೆ ತಪ್ಪಿಸಲು ಮಹತ್ವದ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 18:42 IST
Last Updated 17 ಜನವರಿ 2019, 18:42 IST
ಸ
   

ಹೈದರಾಬಾದ್‌: ಜೀವ ವೈದ್ಯಕೀಯ ಸಂಶೋಧನೆಯಲ್ಲಿ ಪ್ರಾಣಿಗಳ ಬಳಕೆ ತಪ್ಪಿಸಿ ಪರ್ಯಾಯ ತಂತ್ರಜ್ಞಾನದ ಮೂಲಕ ಸಂಶೋಧನೆ ಕೈಗೊಳ್ಳುವ ಕೇಂದ್ರವನ್ನು ಸ್ಥಾಪಿಸಲು ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ (ಐಸಿಎಂಆರ್‌) ಮುಂದಾಗಿದೆ.

ಜೀವವೈದ್ಯಕೀಯ ಕ್ಷೇತ್ರದಲ್ಲಿ ಇದು ಉತ್ಕೃಷ್ಟ ಕೇಂದ್ರವಾಗಲಿದೆ ಎಂದು ಐಸಿಎಂಆರ್‌ ತಿಳಿಸಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಕೈಗೊಳ್ಳುವ ಸಂಶೋಧನೆಯಲ್ಲಿ ಮಂಗಗಳು, ನಾಯಿಗಳು ಮತ್ತು ಇತರ ಪ್ರಾಣಿಗಳ ಮೇಲೆ ಅವಲಂಬನೆಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಐಸಿಎಂಆರ್‌ ಯೋಜನೆ ರೂಪಿಸಲಿದೆ. ಇದಕ್ಕಾಗಿ ಖ್ಯಾತ ಭಾರತೀಯ ವಿಜ್ಞಾನಿಗಳು ಮತ್ತು ತಜ್ಞರ ನೆರವು ಪಡೆಯಲಿದೆ.

ADVERTISEMENT

ಅಮೆರಿಕ, ಯುರೋಪ್‌, ಚೀನಾ ಮತ್ತು ಇತರ ಕೆಲವು ರಾಷ್ಟ್ರಗಳ ಮಾದರಿಯಲ್ಲಿ ಕಂಪ್ಯೂಟರ್‌ ಮಾದರಿಯ ತಾಂತ್ರಿಕತೆಯನ್ನು ಆಧರಿಸಿ ಸಂಶೋಧನೆ ಕೈಗೊಳ್ಳುವಂತೆ ‘ಹೂಮನ್‌ ಸೊಸೈಟಿ ಇಂಟರ್‌ನ್ಯಾಷನಲ್‌ (ಎಚ್‌ಐಎಸ್‌) ಹಾಗೂ ಪೀಪಲ್ ಪಾರ್‌ ಅನಿಮಲ್ಸ್‌' ಸಂಸ್ಥೆಗಳು ಭಾರತದ ವೈಜ್ಞಾನಿಕ ಸಂಸ್ಥೆಗಳನ್ನು ಒತ್ತಾಯಿಸಿದ್ದವು.

‘ನಮ್ಮ ಮನವಿಗೆ ಐಸಿಎಂಆರ್‌ ಸ್ಪಂದಿಸಿದೆ. ಪ್ರಾಣಿಗಳ ಆಧಾರಿತ ಸಂಶೋಧನೆ ಮತ್ತು ಪರೀಕ್ಷೆಯನ್ನು ಹಲವು ವಿಜ್ಞಾನಿಗಳು ಪ್ರಶ್ನಿಸುತ್ತಿದ್ದಾರೆ. ವಿದೇಶದಿಂದ ಅನುದಾನ ಪಡೆಯುವ ಸಂಸ್ಥೆಗಳು ಪ್ರಾಣಿಗಳನ್ನು ಬಳಸದ ತಂತ್ರಜ್ಞಾನಕ್ಕಾಗಿ ವೆಚ್ಚ ಮಾಡುತ್ತಿದ್ದಾರೆ’ ಎಂದು ಎಚ್‌ಐಸಿ ಉಪನಿರ್ದೇಶಕ ಅಲೋಕ್‌ಪರ್ನಾ ಸೇನಗುಪ್ತ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.