ADVERTISEMENT

ಬಾಯಿ ಮೂಲಕ ನೀಡುವ ಕೋವಿಡ್‌ ಲಸಿಕೆ ಅಭಿವೃದ್ಧಿ: ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಕೆ

ಪಿಟಿಐ
Published 5 ಜುಲೈ 2021, 12:11 IST
Last Updated 5 ಜುಲೈ 2021, 12:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೋಲ್ಕತ್ತ: ಕೋವಿಡ್ ಸೋಂಕು ವಿರುದ್ಧ ಚಿಕಿತ್ಸೆಗೆ ಬಾಯಿ ಮೂಲಕ ನೀಡುವ ಲಸಿಕೆ ಅಭಿವೃದ್ಧಿಗೆ ಕೋಲ್ಕತ್ತದ ಐಸಿಎಂಆರ್–ಎನ್‌ಐಸಿಇಡಿ ಸಂಸ್ಥೆಯು ಕೇಂದ್ರದ ಜೈವಿಕ ತಂತ್ರಜ್ಞಾನ ಇಲಾಖೆಗೆ ಪ್ರಸ್ತಾಪ ಸಲ್ಲಿಸಿದೆ.

ಸಂಸ್ಥೆಯ ಅಧಿಕಾರಿಗಳು ಸೋಮವಾರ ಈ ಮಾಹಿತಿ ನೀಡಿದ್ದು, ‘ಜರ್ಮನ್‌ ಸಂಸ್ಥೆಯ ಸಹಯೋಗದಲ್ಲಿ ಉಲ್ಲೇಖಿತ ಔಷಧವನ್ನು ಅಭಿವೃದ್ಧಿಲಾಗುವುದು. ಪ್ರಸ್ತಾಪವನ್ನು ಇಲಾಖೆಯ ಪರಿಶೀಲನೆಯಲ್ಲಿದೆ. ಅನುಮೋದನೆ ಮತ್ತು ಹಣಕಾಸು ಬಿಡುಗಡೆ ಹಿಂದೆಯೇ ಅಭಿವೃದ್ಧಿ ಪ್ರಕ್ರಿಯೆಯೂ ಶುರುವಾಗಲಿದೆ‘ ಎಂದು ತಿಳಿಸಿದ್ದಾರೆ.

‘ಬಾಯಿ ಮೂಲಕ ನೀಡಬಹುದಾದ ಔಷಧವನ್ನು ಅಭಿವೃದ್ಧಿಪಡಿಸಲು ಸುಮಾರು 5–6 ವರ್ಷ ಬೇಕಾಗಬಹುದು. ಅಭಿವೃದ್ಧಿಯ ಬಳಿಕ ಎಲ್ಲ ಲಸಿಕೆಗಳಿಗೂ ಮಾಡುವಂತೆ ಇದನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಲಾಗುವುದು’ ಎಂದು ಐಸಿಎಂಆರ್‌–ಎನ್ಐಸಿಇಡಿ ನಿರ್ದೇಶಕ ಶಾಂತ ದತ್ತಾ ಅವರು ವಿವರಿಸಿದರು.

ADVERTISEMENT

ಲಸಿಕೆಯ ಪ್ರಯೋಗ ಕುರಿತ ಎಲ್ಲ ನಿಯಮಗಳನ್ನು ಪಾಲಿಸಲಾಗುವುದು. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲು 5–6 ವರ್ಷ ಬೇಕಾಗಬಹುದು. ಆ ನಂತರವೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.