ADVERTISEMENT

ಕೋವಿಡ್‌ ಪ್ರಸರಣ ತಿಳಿಯಲು ಐಸಿಎಂಆರ್‌ನಿಂದ ರಾಷ್ಟ್ರ ಮಟ್ಟದ ಸಿರೊಲಾಜಿಕಲ್ ಸಮೀಕ್ಷೆ

ಪಿಟಿಐ
Published 11 ಜೂನ್ 2021, 16:43 IST
Last Updated 11 ಜೂನ್ 2021, 16:43 IST
ಸಾಂದರ್ಭಿಕ ಚಿತ್ರ (ಕೃಪೆ – ಪಿಟಿಐ)
ಸಾಂದರ್ಭಿಕ ಚಿತ್ರ (ಕೃಪೆ – ಪಿಟಿಐ)   

ನವದೆಹಲಿ: ಕೋವಿಡ್–19 ಪ್ರಸರಣದ ಬಗ್ಗೆ ಮಾಹಿತಿ ಕಲೆಹಾಕಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ರಾಷ್ಟ್ರಮಟ್ಟದ ಸಿರೊಲಾಜಿಕಲ್ ಸಮೀಕ್ಷೆ ನಡೆಸಲಿದೆ. ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದನ್ನು ಪ್ರೋತ್ಸಾಹಿಸಬೇಕು. ಇದರಿಂದ ಎಲ್ಲ ಪ್ರದೇಶಗಳಲ್ಲಿ ಸೋಂಕಿನ ಪ್ರಸರಣದ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೂ ಜನರು ಮುನ್ನೆಚ್ಚರಿಕೆ ವಹಿಸಬೇಕು. ದೈಹಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಚಿವಾಲಯ ಹೇಳಿದೆ.

ಮೇ 7ರಂದು ದೇಶದಲ್ಲಿ ದೈನಂದಿನ ಕೋವಿಡ್ ಪ್ರಕರಣ ಗರಿಷ್ಠ ಮಟ್ಟ ತಲುಪಿತ್ತು. ಆ ಬಳಿಕ ಇದೀಗ ಶೇ 78ರಷ್ಟು ಇಳಿಕೆಯಾಗಿದೆ. ವಾರದ ಪಾಸಿಟಿವಿಟಿ ಪ್ರಮಾಣವೂ ಶೇ 74ರಷ್ಟು ಇಳಿಕೆಯಾಗಿದೆ. ಏಪ್ರಿಲ್ 30 ಹಾಗೂ ಮೇ 6ರ ನಡುವಣ ಅವಧಿಯಲ್ಲಿ ವಾರದ ಪಾಸಿಟಿವಿಟಿ ಪ್ರಮಾಣ ಶೇ 21.6ರಷ್ಟಿದ್ದು, ಗರಿಷ್ಠ ಮಟ್ಟದಲ್ಲಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.