ADVERTISEMENT

ಅಮೆರಿಕ ಅಧ್ಯಕ್ಷನಾಗಿ ಆಯ್ಕೆಯಾದರೆ ಚೀನಾ ಅಧಿಕಾರಿಗಳಿಗೆ ನಿರ್ಬಂಧ: ಬೈಡನ್‌ ಭರವಸೆ

ಟಿಬೆಟ್‌ನಲ್ಲಿ ಮಾನವ ಹಕ್ಕುಗಳ ನಿಂದನೆ ಘಟನೆ

ಪಿಟಿಐ
Published 4 ಸೆಪ್ಟೆಂಬರ್ 2020, 12:31 IST
Last Updated 4 ಸೆಪ್ಟೆಂಬರ್ 2020, 12:31 IST
ಜೊ ಬೈಡನ್‌
ಜೊ ಬೈಡನ್‌   

ವಾಷಿಂಗ್ಟನ್‌: ಟಿಬೆಟ್‌ ಮೇಲೆ ಮತ್ತೆ ಬಿಗಿಯಾದ ನಿಯಂತ್ರಣ ಸಾಧಿಸುವ ಚೀನಾದ ಯೋಜನೆಯನ್ನು ಟೀಕಿಸಿರುವ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೊ ಬೈಡನ್‌, ಒಂದು ವೇಳೆ ಅಧಿಕಾರಕ್ಕೆ ಬಂದರೆ ಟಿಬೆಟ್‌ನಲ್ಲಿನ ಮಾನವ ಹಕ್ಕುಗಳ ನಿಂದನೆಗೆ ಕಾರಣವಾಗಿರುವ ಚೀನಾದ ಅಧಿಕಾರಿಗಳ ವಿರುದ್ಧ ನಿರ್ಬಂಧದ ಭರವಸೆಯನ್ನು ನೀಡಿದ್ದಾರೆ.

ತಮ್ಮ ಸಂಸ್ಕೃತಿ, ಭಾಷೆ ಹಾಗೂ ನಂಬಿಕೆಗಳನ್ನು ಸಂರಕ್ಷಿಸಲು ಬಯಸುವ ಅಲ್ಪಸಂಖ್ಯಾತರನ್ನು ತುಳಿಯುವ ಚೀನಾದ ಪ್ರಯತ್ನ ಇದಾಗಿದೆ ಎಂದು ಬೈಡನ್‌ ಆರೋಪಿಸಿದ್ದಾರೆ. ಟಿಬೆಟ್‌ ಮೇಲೆ ಬಿಗಿಹಿಡಿತ ಸಾಧಿಸುವ ಯೋಜನೆಗಳನ್ನು ಇತ್ತೀಚೆಗಷ್ಟೇ ಚೀನಾ ಪ್ರಕಟಿಸಿದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆ, ಧಾರ್ಮಿಕ ಸ್ವಾತಂತ್ರ್ಯ, ಟಿಬೆಟ್‌ನ ಜನರ ಘನತೆಯನ್ನು ಕಸಿಯುವ ಪ್ರಯತ್ನ ಎಂದು ಟೀಕಿಸಿದ್ದಾರೆ.

‘ಅಧಿಕಾರಕ್ಕೆ ಬಂದರೆ, ನನ್ನ ಆಡಳಿತವು ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ನಿರ್ಬಂಧಿಸಲಿದೆ. ಜೊತೆಗೆ ಟಿಬೆಟ್‌ ಜನರ ಬೆಂಬಲಕ್ಕೂ ನಿಲ್ಲಲಿದೆ. ಟ್ರಂಪ್‌ ಆಡಳಿತ ಈ ವಿಚಾರದಲ್ಲಿ ಅಂಧವಾಗಿದೆ. ಅಧ್ಯಕ್ಷನಾದರೆ ಖಂಡಿತವಾಗಿಯೂ ದಲೈಲಾಮಾ ಅವರನ್ನು ಭೇಟಿಯಾಗುತ್ತೇನೆ ಹಾಗೂ ಟಿಬೆಟ್‌ಗೆ ವಿಶೇಷ ಸಮನ್ವಯಾಧಿಕಾರಿ ನೇಮಿಸುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.