ADVERTISEMENT

ತಾಲಿಬಾನ್‌ ಭಾರತದತ್ತ ಬಂದರೆ ವೈಮಾನಿಕ ದಾಳಿಗೆ ಸಜ್ಜು: ಯೋಗಿ ಆದಿತ್ಯನಾಥ್‌

ಪಿಟಿಐ
Published 1 ನವೆಂಬರ್ 2021, 9:04 IST
Last Updated 1 ನವೆಂಬರ್ 2021, 9:04 IST
ಯೋಗಿ ಆದಿತ್ಯನಾಥ್‌
ಯೋಗಿ ಆದಿತ್ಯನಾಥ್‌   

ಲಖನೌ: ತಾಲಿಬಾನ್‌ನಿಂದ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ತಲ್ಲಣಗೊಂಡಿವೆ. ಆದರೆ ಈ ಬಂಡುಕೋರ ಗುಂಪು ಭಾರತದತ್ತ ಬಂದರೆ ಇಲ್ಲಿ ವೈಮಾನಿಕ ದಾಳಿಯೊಂದು ಸಜ್ಜಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭಾನುವಾರ ಹೇಳಿದರು.

ಇಲ್ಲಿ ನಡೆದ ಸಾಮಾಜಿಕ ಪ್ರತಿನಿಧಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವೇಳೆ ರಾಜ್ಯದಲ್ಲಿನ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

‘ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶವು ಇಂದು ಶಕ್ತಿಶಾಲಿಯಾಗಿದ್ದು, ಯಾವುದೇ ದೇಶವೂ ಭಾರತದತ್ತ ತನ್ನ ದೃಷ್ಟಿ ಹಾಯಿಸುವ ಧೈರ್ಯ ಹೊಂದಿಲ್ಲ. ತಾಲಿಬಾನ್‌ನಿಂದ ಇಂದು ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ತಲ್ಲಣಗೊಂಡಿವೆ. ಒಂದು ವೇಳೆ ಭಾರತದ ತಂಟೆಗೆ ಹೋದರೆ ವೈಮಾನಿಕ ದಾಳಿಯೊಂದನ್ನು ಎದುರಿಸಬೇಕು ಎಂಬುದು ತಾಲಿಬಾನ್‌ಗೆ ತಿಳಿದಿದೆ’ ಎಂದು ಯೋಗಿ ಹೇಳಿದರು.

ADVERTISEMENT

ಉತ್ತರ ಪ್ರದೇಶದ ಬಿಜೆಪಿ ಘಟಕವು ಈ ಬಗ್ಗೆ ಅವರ ಹೇಳಿಕೆಯ ಪ್ರಕಟಣೆಯೊಂದನ್ನು ಹೊರಡಿಸಿದೆ.

ಆದಿತ್ಯನಾಥ್‌ ಅವರು ಎಸ್‌ಬಿಎಸ್‌ಪಿ ಮುಖ್ಯಸ್ಥ ಓಂ ಪ್ರಕಾಶ್‌ ರಾಜ್‌ಭರ್‌ ಅವರನ್ನು ಉಲ್ಲೇಖಿಸಿ, ‘ಅವರ (ರಾಜ್‌ಭರ್‌) ಚಿಂತನಾ ಲಹರಿಯು ಅವರ ಕುಟುಂಬದ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದೆ’ ಎಂದು ಅಣಕವಾಡಿದರು.

‘ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಅಭಿವೃದ್ಧಿಗಾಗಿ ಏನೂ ಮಾಡುವುದಿಲ್ಲ’ ಎಂದೂ ಅವರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.