ADVERTISEMENT

ಐಐಟಿ–ನಾಗಪುರ ವಿದ್ಯಾರ್ಥಿಗೆ ವಾರ್ಷಿಕ ₹ 40 ಲಕ್ಷ ವೇತನದ ಆಹ್ವಾನ

ಪಿಟಿಐ
Published 6 ಮಾರ್ಚ್ 2020, 20:11 IST
Last Updated 6 ಮಾರ್ಚ್ 2020, 20:11 IST
   

ನಾಗಪುರ: ಇಲ್ಲಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿಗಳಿಗೆ ಶೇ 100ರಷ್ಟು ಉದ್ಯೋಗಾವಕಾಶ ದೊರೆತ ಸಾಧನೆ ಮಾಡಿದೆ. ವಿದ್ಯಾರ್ಥಿಯೊಬ್ಬರಿಗೆ ದೊರೆತಿರುವ ಗರಿಷ್ಠವೇತನದ ಪ್ಯಾಕೇಜ್ ವಾರ್ಷಿಕ ₹ 40 ಲಕ್ಷ ಆಗಿದೆ.

ಕಳೆದ ವರ್ಷ ಪ್ಲೇಸ್‌ಮೆಂಟ್ ಪ್ರಕ್ರಿಯೆಯಲ್ಲಿ ದೊರೆತಿದ್ದ ಗರಿಷ್ಠ ವೇತನ ಪ್ಯಾಕೇಜ್ ವಾರ್ಷಿಕ ₹ 20 ಲಕ್ಷ ಆಗಿತ್ತು. ಈ ವರ್ಷ ಸರಾಸರಿ ವಾರ್ಷಿಕ ವೇತನ ಪ್ಯಾಕೇಜ್‌ ₹ 13.10 ಲಕ್ಷ ಆಗಿದೆ ಎಂದು ಹೇಳಿಕೆಯಲ್ಲಿ ಐಐಟಿ–ನಾಗಪುರ ನಿರ್ದೇಶಕ ಪ್ರೊ.ಎಲ್.ಎಸ್‌.ಮೂರ್ತಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT