ADVERTISEMENT

ಧಾರವಾಡ ಐಐಟಿಗೆ ಅನುದಾನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 19:57 IST
Last Updated 5 ಜುಲೈ 2018, 19:57 IST

ನವದೆಹಲಿ: ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಗೆ ಶಾಶ್ವತ ಕ್ಯಾಂಪಸ್‌ ನಿರ್ಮಾಣಕ್ಕಾಗಿ ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿಯಿಂದ (ಎಚ್‌ಇಎಫ್‌ಎ) ಹಣಕಾಸು ನೆರವು ದೊರೆಯಲಿದೆ.

ಧಾರವಾಡದ ಐಐಟಿ ಜತೆಗೆ ಭಿಲಾಯಿ, ಜಮ್ಮು, ತಿರುಪತಿ, ಪಾಲಕ್ಕಾಡ್‌ ಐಐಟಿಗಳು ಮತ್ತು ಆಂಧ್ರಪ್ರದೇಶದ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ಗೂ ಹಣಕಾಸಿನ ನೆರವು ದೊರೆಯಲಿದೆ.

ಆರು ಐಐಟಿಗಳಿಗೆ ಒಟ್ಟು ₹5,691 ಕೋಟಿ ನೆರವು ದೊರೆಯಲಿದೆ. ಧಾರವಾಡ ಐಐಟಿ ಸೇರಿದಂತೆ ಶಾಶ್ವತ ಕ್ಯಾಂಪಸ್‌ ನಿರ್ಮಾಣಕ್ಕೆ ₹7002 ಕೋಟಿ ನೀಡಲು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಡೆದ ಕೇಂದ್ರ ಸಂಪುಟ ಅನುಮೋದನೆ ನೀಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.