ನವದೆಹಲಿ: ಗುವಾಹಟಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಸಂಶೋಧಕರು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಳಸಬಹುದಾದ ಜೈವಿಕವಾಗಿ ಕರಗಬಹುದಾದ ಪರಿಸರ ಸ್ನೇಹಿ ಉತ್ಪನ್ನವನ್ನು ಬಿದಿರಿನಿಂದ ಅಬಿವೃದ್ಧಿ ಪಡಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಬಿದಿರಿನಲ್ಲಿ ಹೆಚ್ಚಿನ ಶಕ್ತಿ, ಉಷ್ಣ ಪ್ರತಿರೋಧ ಸಾಮರ್ಥ್ಯ, ತೇವಾಂಶ ಕಡಿಮೆ ಹೀರಿಕೊಳ್ಳುವಿಕೆ ಹಾಗೂ ಕಡಿಮೆ ವೆಚ್ಚ ತಗಲುವುದುರಿಂದ ಇದನ್ನು ಪ್ಲಾಸ್ಟಿಕ್‌ನ ಪರ್ಯಾಯವಾಗಿ ಬಳಸುವುದು ಸುಲಭ ಎಂದು ‘ಸ್ಪ್ರಿಂಜರ್ ನೇಚರ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ಲಾಸ್ಟಿಕ್‌ಗೆ ಮಾತ್ರವಲ್ಲದೆ ಪರಿಸರ ಸ್ನೇಹಿ ವಸ್ತುಗಳ ಹೆಚ್ಚುತ್ತಿರುವ ಬೇಡಿಕೆಗೆ ಇದು ಪರ್ಯಾಯ ಮಾರ್ಗವಾಗಿದೆ ಎಂದು ಮ್ಯಾಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಪೂನಮ್ ಕುಮಾರಿ ತಿಳಿಸಿದ್ದಾರೆ.
ಈ ಪಾಲಿಮಾರ್ ಅನ್ನು 17 ವಿಧವಾದ ಪರೀಕ್ಷೆಗೆ ಒಳಪಡಿಸಿ ಅದರ ಶಕ್ತಿ, ಉಷ್ಣ ಪ್ರತಿರೋಧ ಸಾಮರ್ಥ್ಯ, ತೇವಾಂಶ ಹೀರಿಕೊಳ್ಳುವಿಕೆಯನ್ನು ತಿಳಿದುಕೊಳ್ಳಲಾಗಿದೆ ಎಂದು ಕುಮಾರಿ ಹೇಳಿದ್ದಾರೆ.
ಇದನ್ನು ವಾಹನಗಳ ಡ್ಯಾಶ್ ಬೋರ್ಡ್, ಡೋರ್ ಪ್ಯಾನಲ್, ಆಸನಗಳ ತಯಾರಿಕೆಗೆ ಬಳಸಬಹುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.